ಉಪ್ಪಿನಂಗಡಿ: ಕಾಡಾನೆ ದಾಳಿಯಿಂದ ಕೃಷಿ ನಾಶ
Update: 2025-01-22 22:42 IST
ಉಪ್ಪಿನಂಗಡಿ: ಕಳೆದ ರಾತ್ರಿ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ಶಿರಾಡಿಯಲ್ಲಿ ನಡೆದಿದೆ.
ಶಿರಾಡಿ ನಿವಾಸಿಗಳಾದ ದಿವಾಕರ ಗೌಡ, ದಿನಕರ, ರವಿಶಂಕರ, ಸುಧಾಕರ, ರವಿಚಂದ್ರ, ತೋಮಸ್ ಹಾಗೂ ಇನ್ನಿತರರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ. ನೀರಿನ ಪೈಪ್, ಸ್ಪ್ರಿಂಕ್ಲರ್‍ಗಳೂ ಹಾನಿಗೊಂಡಿವೆ ಎಂದು ವರದಿಯಾಗಿದೆ. ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ಕೃಷಿ ತೋಟಕ್ಕೆ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿದ್ದು ಆನೆಯ ಉಪಟಳದಿಂದ ಕೃಷಿಕರು ಕಂಗಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅರಣ್ಯ ಪಾಲಕರು, ಅರಣ್ಯ ರಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.