×
Ad

ಕೆ.ಸಿ ರೊಡ್‌: ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Update: 2025-01-26 23:10 IST

ಮಂಗಳೂರು: ತಲಪಾಡಿ ಕೆ.ಸಿ ರೊಡ್‌ನ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಆಡಳಿತ ಮಂಡಳಿ ಫಲಾಹ್ ಎಜುಕೇಶನ್ ಸೊಸೈಟಿ (ರಿ) ಯ ಕೋಶಾಧಿಕಾರಿ ಅಬ್ಬಾಸ್ ಮಜಲ್ ಧ್ವಜರೋಹಣಗೈದರು. ಸಂಸ್ಥೆಯ ಜೊತೆ ಕಾರ್ಯದರ್ಶಿ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ. ಇಸ್ಮಾಯಿಲ್ ತಲಪಾಡಿ ಸಾಂದರ್ಭಿಕವಾಗಿ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಎನ್ .ಅರಬಿ ಕುಂಞಿ, ಕೋಶಾಧಿಕಾರಿ ಅಬ್ಬಾಸ್ ಮಜಲ್, ಸಂಸ್ಥೆಯ ಪ್ರಾಂಶುಪಾಲರಾದ ರೇವತಿ ಎನ್ ರೈ, ಅನುದಾನಿತ ಕನ್ನಡ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಮುಹಮ್ಮದ್ ರಫೀಕ್ , ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗೀತಾಂಜಲಿ, ಮ್ಯಾನೇಜರ್ ರಾಜ್ ಕಿಶೋರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜೀವಿತಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News