×
Ad

ಉಳ್ಳಾಲ: ಆರೋಗ್ಯ ಮತ್ತು ರಕ್ತದಾನ ಶಿಬಿರ

Update: 2025-01-27 18:37 IST

ಉಳ್ಳಾಲ: ಬ್ಲೂಲೈನ್ ಫೌಂಡೇಶನ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಆರೋಗ್ಯ ಹಾಗೂ ರಕ್ತದಾನ ಶಿಬಿರವು ಉಳ್ಳಾಲ ತಾಜ್‌ಮಹಲ್ ಸಭಾಂಗಣದಲ್ಲಿ ನಡೆಯಿತು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ.ಬದ್ರಿನಾಥ್ ತಲ್ವಾಲ್, ಡಾ.ಅಶೋಕ್, ಡಾ. ನಿರಾತ್, ಡಾ. ರಕ್ಷೀತಾ, ಡಾ. ನೂರುಲ್ಲಾ ನೇತೃತ್ವದಲ್ಲಿ ತಪಾಸಣೆ ಹಾಗೂ ಔಷಧ ಹಾಗೂ ನೇತ್ರ ಶಾಸ್ತ್ರ ವಿಭಾಗದಿಂದ ಉಚಿತ ಕನ್ನಡಕ ವಿತರಿಸಲಾಯಿತು. ಅಲ್ಲದೆ ಇಂಡಿಯಾನ್ ಕ್ಯಾನ್ಸರ್ ಸೊಸೈಟಿಯಿಂದ ಉಚಿತ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರವೂ ನಡೆಯಿತು.

ಈ ಸಂದರ್ಭ ಬ್ಲೂ ಲೈನ್ ಫೌಂಡೇಶನ್ ಆಧ್ಯಕ್ಷ ಶೌಕತ್ ಶೌರಿ, ಬ್ಲೂಲೈನ್ ಸಮೂಹ ಸಂಸ್ಥೆಯ ನಿದೇರ್ಶಕ ಮುಹಮ್ಮದ್ ಫಕೀರ್, ಶಿಬಿರದ ಸಂಯೋಜಕ ಗುಲಾಮ್ ಅಬ್ಬಾಸ್, ಅಹ್ಮದ್ ಅಯ್ಯೂಬ್, ಅಬ್ದುಲ್ ರಝಾಕ್ ಗೋಳ್ತಮಜಲ್, ಮುಹಮ್ಮದ್ ನಿಸಾರ್ ಫಕೀರ್, ಫಿರೋಝ್ ಮಕ್ಕಚ್ಚೇರಿ, ಬಶೀರಾ ರಝಾಕ್, ಫಾತಿಮಾ ಮೆಹರೂನ್, ಹಾರೂನ್ ರಶೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News