×
Ad

ಕಾರಾಗೃಹದ ಬಳಿ ಅನುಮಾನಾಸ್ಪದ ವಸ್ತು ಎಸೆದು ಪರಾರಿಯಾದ ತಂಡ: ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲು

Update: 2025-01-27 22:13 IST

ಮಂಗಳೂರು, ಜ.27: ನಗರದ ಜಿಲ್ಲಾ ಕೇಂದ್ರ ಕಾರಾಗೃಹದ ಕ್ವಾರಂಟೈನ್ ಪ್ರದೇಶಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರ ತಂಡವೊಂದು ಅನುಮಾನಾಸ್ಪದ ವಸ್ತುವನ್ನು ಎಸೆದು ಪರಾರಿಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.24ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಮುಖ್ಯ ರಸ್ತೆಯಿಂದ ಒಳಬಂದ ಅಪರಿಚತ ವ್ಯಕ್ತಿಗಳು ಅನುಮಾನಾಸ್ಪದ ವಸ್ತುವನ್ನು ಎಸೆದಿದ್ದಾರೆ. ಇದನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿ ಮಂಜುನಾಥ ಎಂ. ಗಮನಿಸಿ ಮೇಲಾಧಿಕಾರಿ ಎಎಸ್ಸೈ ಪರಶುರಾಮಪ್ಪರ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಬಂದ ಎಎಸ್ಸೈ ಪರಿಶೀಲಿಸಿದಾಗ ಬಿಳಿ ಬಣ್ಣದ ಚಪ್ಪಲಿಯ ಒಳಗೆ ಕಪ್ಪು ಬಣ್ಣದ ಮೊಬೈಲ್‌ನಂತೆ ಕಾಣುವ ವಸ್ತುವನ್ನು ಎಸೆದಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News