ದೇರಳಕಟ್ಟೆ: ಆರೋಗ್ಯ ಜಾಗೃತಿಯ ಫಾರ್ಮಾ ಜಾಥಾ
Update: 2025-01-29 18:31 IST
ಉಳ್ಳಾಲ:ಪಿ.ಎ. ಕಾಲೇಜ್ ಆಫ್ ಫಾರ್ಮಸಿ, ನಡುಪದವು ಇದರ ಆಶ್ರಯದಲ್ಲಿ ಮಂಗಳೂರು ಇದರ ಎನ್ನೆಸ್ಸೆಸ್ ಘಟಕ ಇದರ ಸಹಯೋಗದೊಂದಿಗೆ ಆರೋಗ್ಯ ಜಾಗೃತಿಯ ಫಾರ್ಮಾ ಜಾಥಾವು ದೇರಳಕಟ್ಟೆ ಯಲ್ಲಿ ನಡೆಯಿತು.
ಕೊಣಾಜೆ ಪೊಲೀಸ್ ಉಪನಿರೀಕ್ಷಕ ಪುನೀತ್ ಎಂ. ಗಾಂವ್ಕರ್ ಜಾಥಾವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಸಂರಕ್ಷಣೆಯ ಮಹತ್ವ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸುವ ಅಗತ್ಯತೆಯನ್ನು ಪ್ರಸ್ತಾಪಿಸಿದರು.
ಪಿ. ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ರೋಗಗಳನ್ನು ತಡೆಗಟ್ಟುವ ಕ್ರಮಗಳ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ಉತ್ಸಾಹಭರಿತವಾಗಿ ಜಾಥಾದಲ್ಲಿ ಪಾಲ್ಗೊಂಡು ಪರಿಣಾಮಕಾರಿ ಘೋಷಣೆಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಿದರು.
ಜನತೆಗೆ ಆರೋಗ್ಯ ಸಂರಕ್ಷಣೆಯ ಪರಿಣಾಮಗಳ ಬಗ್ಗೆ ಕರಪತ್ರಗಳನ್ನು ವಿತರಿಸಲಾಯಿತು. ಜಾಥಾದ ಉದ್ದೇಶವನ್ನು ವಿವರಿಸಿದ ಎನ್ನೆಸ್ಸೆಸ್ ಸಂಯೋಜಕ ಪ್ರೊ. ಡಾ. ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.