ಕಾವಳಪಡೂರು ವಗ್ಗ ಶಾಲೆಯಲ್ಲಿ ವಿಷಯವಾರು ಕಾರ್ಯಾಗಾರ
ಬಂಟ್ವಾಳ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ಮಂಗಳೂರು ಮತ್ತು ಶಾಲಾ ಶಿಕ್ಷಣ ಇಲಾಖೆ ದ.ಕ.ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ಅಂಕ ಉನ್ನತೀಕರಣ ಅಭಿಯಾನದ ಅಂಗವಾಗಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಕಾರ್ಯಾಗಾರವು ಬುಧವಾರ ಕಾವಳಪಡೂರು ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಾಗಾರದಲ್ಲಿ ಅಭಿಯಾನದಲ್ಲಿ ಕಾವಳಪಡೂರ್ ಸರಕಾರಿ ಪ್ರೌಢಶಾಲೆ, ಮಣಿನಾಲ್ಕೂರು ಸರಕಾರಿ ಪ್ರೌಢಶಾಲೆ, ಕಾವಳಕಟ್ಟೆ ಸರಕಾರಿ ಪ್ರೌಢಶಾಲೆ, ಕಕ್ಕೆಪದವು ಪಂಚದುರ್ಗ ಪ್ರೌಢಶಾಲೆಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಪಿ. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪಿ. ಜಿನರಾಜ ಆರಿಗ ಅತಿಥಿಗಳಾಗಿ ಭಾಗವಹಿಸಿದ್ದರು. ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಮುಹಮ್ಮದ್ ನಾಝಿಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿ ದರು. ಶೇಕ್ ಆದಂ ಸಾಹೇಬ್ ವಂದಿಸಿದರು. ನಕಾಶ್ ಬಾಂಬಿಲ ಸಹಕರಿಸಿದರು. ಗಣಿತ ತರಬೇತುದಾರರಾಗಿ ಸಜಿಪಮೂಡ ಸರಕಾರಿ ಶಾಲೆಯ ಶಿಕ್ಷಕ ಗಣೇಶ್ ಭಾಗವಹಿಸಿದ್ದರು.