ಸಾರಿಗೆ ಸಮಸ್ಯೆಗಳ ಬಗ್ಗೆ ಸಚಿವ ರಾಮಲಿಂಗ ರೆಡ್ಡಿಗೆ ಮನವಿ ಸಲ್ಲಿಕೆ
ಮಂಗಳೂರು; ನಗರದ ಮಂಗಳೂರು ಆರ್ ಟಿಒ ಕಚೇರಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಯೂಸ್ ಡ್ ವೆಹಿಕಲ್ ಡೀಲರ್ ಗಳ ನಿಯೋಗ ತಮ್ಮ ಸಮಸ್ಯೆ ಮತ್ತು ಗ್ರಾಹಕರಿಗೆ ಎದುರಾಗುತ್ತಿ ರುವ ಸಮಸ್ಯೆ ಗಳ ಬಗ್ಗೆ ಸಚಿವರಿಗೆ ವಿವರಿಸಿ ಮನವಿ ಅರ್ಪಿಸಿದರು.
ಈ ಬಗ್ಗೆ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಭರವಸೆ ನೀಡಿದರು ನಿಯೋಗದಲ್ಲಿ ಯೂಸ್ ಡ್ ವೆಹಿಕಲ್ ಡೀಲರ್ ಗಳ
ದ.ಕ ಜಿಲ್ಲಾ ಸಂಘಟನೆಯ ಅಧ್ಯಕ್ಷ ಜಯರಾಜ್ ಕೋಟ್ಯಾನ್, ಉಪಾಧ್ಯಕ್ಷ ಅಶೋಕ್ ಕೋಟ್ಯಾನ್, ಕಾರ್ಯದರ್ಶಿ ಹರ್ಷ ವರ್ಧನ ಶೇಟ್ ಪದಾಧಿಕಾರಿಗಳಾದ ಕಿಶೋರ್ ದೇವರಾಜ್,ಪ್ರತಾಪ್, ಕೆಎಸ್ ಅರ್ ಟಿಸಿ ನಿಗಮದ ಸಲಹಾ ಸಮಿತಿಯ ನಿರ್ದೇಶಕ ರಾಗಿ ನೇಮಕಗೊಂಡಿದ್ದ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಸಾರಿಗೆ ಕಚೇರಿಯಲ್ಲಿ ವಿಳಂಬ ಗೊಳ್ಳುತ್ತಿರುವ ದಾಖಲೆ ಪತ್ರ ವರ್ಗಾವಣೆ ಇನ್ನಿತರ ವಿಷಯಗಳ ಬಗ್ಗೆ ಹಳೇ ವಾಹನ ಮಾರಾಟದ ಮಾಡಿದ ವಾಹನಗಳ ದಾಖಲೆ ಪತ್ರಗಳ ವರ್ಗಾವಣೆ, ಲೋನ್ ಕ್ಯಾನ್ಸಲ್ಲೇಶನ್, ಡುಪ್ಲಿಕೇಟ್ ಆರ್. ಸಿ, ಕ್ಲಿಯರೆನ್ಸ್ ಸರ್ಟಿಫಿಕೇಟ್, ಇನ್ನಿತರ ಕಾಗದಪತ್ರಗಳ ಕೆಲಸ ಕಾರ್ಯಗಳು ತಮ್ಮ ಕಚೇರಿಯಲ್ಲಿ ವಿಳಂಬವಾಗುತ್ತಿದ್ದು ಇದ ರಿಂದ ನಾವುಗಳು ತುಂಬಾ ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಈ ಹಿಂದಿನ ಅಧಿಕಾರಗಳಲ್ಲಿಯೂ ಕೂಡ ಈ ಬಗ್ಗೆ ಸಮಾಲೋಚಿಸಿರುತ್ತೇವೆ. ತಾವುಗಳು ಈ ಮನವಿಯನ್ನು ಗಮನಿಸಿಕೊಂಡು ಸಾರಿಗೆ ಕಚೇರಿಯಲ್ಲಿ ಆಗುತ್ತಿರುವ ಸಮಸ್ಯೆ ಗಳಿಗೆ ಪರಿಹಾರವನ್ನು ಒದಗಿಸಿ ಕೊಡಬೇಕಾಗಿ ಕೋರಿದ್ದಾರೆ.