ಮಂಗಳೂರು: ಸರ್ವಜ್ಞ ಜಯಂತಿ ಆಚರಣೆ
ಮಂಗಳೂರು, ಫೆ.20: ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ದ.ಕ. ಜಿಲ್ಲಾ ಸಂಘಗಳ ಒಕ್ಕೂಟ, ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವ ವೇದಿಕೆ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ (ರಿ)ದ ವತಿಯಿಂದನಗರದ ಬೊಂದೇಲ್‌ನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ ಗುರುವಾರ ಸರ್ವಜ್ಞ ಜಯಂತಿ ಆಚರಿಸಲಾಯಿತು.
ಶಾಸಕ ಡಾ. ವೈ. ಭರತ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್, ಕುಲಾಲ ಕುಂಬಾರ ಸಮುದಾಯದ ನಾಯಕರಾದ ಡಾ. ಅಣ್ಣಯ್ಯ ಕುಲಾಲ್, ಜಯೇಶ್ ಗೋವಿಂದ, ಅನಿಲ್‌ದಾಸ್, ದಿನಕರ ಸುರತ್ಕಲ್, ಸುಧಾಕರ್ ಸುರತ್ಕಲ್, ಮಹಾಬಲ ಮಾಸ್ಟರ್, ಸುಕುಮಾರ್ ಬಂಟ್ವಾಳ, ಶೇಷಪ್ಪಮಾಸ್ಟರ್, ಅಶೋಕ್ ಕುಲಾಲ್, ದೇವಿಪ್ರಸಾದ್ ಶಕ್ತಿನಗರ, ಹೊನ್ನಯ್ಯ ಕಾಟಿಪಳ್ಳ, ಪ್ರಸಾದ್ ಕುಲಾಲ್, ಶೇಖರ್ ಬೊಂಡಂತಿಲ, ಭೋಜ ಅಡ್ಯಾರ್, ಗಂಗಾಧರ್ ಕೆ., ಉಮೇಶ್ ಕೆ.ಎನ್., ಬಬಿತಾ ರವೀಂದ್ರ, ಮಮತಾ ಎ. ಕುಲಾಲ್, ಪ್ರಮೀಳಾ ಅನಿಲ್, ಕೆ.ಸಿ. ಲೀಲಾವತಿ, ಸಾವಿತ್ರಿ, ಮಹಾಬಲ ಹಾಂಡ ಮತ್ತಿತರರು ಬೊಂದೇಲ್‌ನ ಸರ್ವಜ್ಞ ವೃತ್ತದ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿದರು. ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕ ಡಾ.ಯತೀಶ್ ಕುಮಾರ್ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಗುಣವಂತ ವಿ. ಗುನಗಿ ಅಧ್ಯಕ್ಷತೆ ವಹಿಸಿದರು.
ಕನ್ನಡ ಸಂಸ್ಕೃತಿಯ ಇಲಾಖೆಯ ರಾಜೇಶ್ ಸ್ವಾಗತಿಸಿದರು. ಗಂಗಾದರ ಬಂಜನ್, ಜಯೇಶ್, ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸುಕುಮಾರ್ ಬಂಟ್ವಾಳ ವಂದಿಸಿದರು.