×
Ad

ʼಆನೆ ಬಂತೊಂದಾನೆʼ ಕಥಾ ಸಂಕಲನ ಬಿಡುಗಡೆ

Update: 2025-02-22 20:11 IST

ಕೊಣಾಜೆ, ಫೆ.22: ಭಾರತ್ ಸೋಷಿಯಲ್ ವೆಲ್ಫೇರ್ ಆ್ಯಂಡ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಎನ್.ಎನ್. ಅಮೀನ್ ಪಕ್ಕಲಡ್ಕ ಅವರ ಮೊದಲ ಕಥಾ ಸಂಕಲನ ಆನೆ ಬಂತೊಂದಾನೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದಂದು ಕುಲಸಚಿವ ರಾಜು ಮೊಗವೀರ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ. ಪ್ರಭಾಕರ ಶಿಶಿಲ ನಿರ್ವಹಿಸಿದರು.

ಕಸಾಪ ದ.ಕ. ಜಿಲ್ಲಾಧ್ಯಕ್ಷ ಎಂ.ಪಿ ಶ್ರೀನಾಥ್, ಮಂಗಳೂರು ಮಹಿಳಾ ಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಪ್ರಕಾಶಕ ಕಲ್ಲೂರು ನಾಗೇಶ್, ಕಸಾಪ ಉಳ್ಳಾಲ ತಾಲೂಕು ಅಧ್ಯಕ್ಷ ಧನಂಜಯ ಕುಂಬ್ಳೆ, ಪ್ರೊ. ಮೋಹನ್ ಕುಂಟಾರ್, ಪ್ರೊ. ಸೋಮಣ್ಣ ಹೊಂಗಳ್ಳಿ, ಸ್ಮಿತಾ ಅಮೃತರಾಜ್ ಸಂಪಾಜೆ, ರೇಣುಕಾ ಸುಧೀರ್ ಅರಸಿನಮಕ್ಕಿ, ಪುಸ್ತಕ ಬಿಡುಗಡೆ ಸಮಿತಿಯ ಸಂಚಾಲಕ ಅಶೀರುದ್ದೀನ್ ಸಾರ್ತಬೈಲ್ ಉಪಸ್ಥಿತರಿದ್ದರು. ಕಸಾಪ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News