ಪಜೀರು: ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಾಲಾ ಊಟದ ಕೊಠಡಿ ಉದ್ಘಾಟನೆ
ಕೊಣಾಜೆ: ಪಜೀರು ಗ್ರಾಮದ ಸಾಂಬಾರತೋಟ ಖಿದ್ಮತುಲ್ ಅಸೋಸಿಯೇಷನ್, ನೂರಾನಿಯಾ ಜಮಾಅತ್ ಕಮಿಟಿ ಕತ್ತರ್ ಘಟಕ ಹಾಗೂ ಯೇನೆಪೊಯ ಆಯುರ್ವೇದ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಹಿಜಾಮ ಶಿಬಿರವು ಸಾಂಬಾರತೋಟದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಯಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಾಲಾ ಊಟದ ಕೊಠಡಿಯ ಉದ್ಘಾಟನೆಯನ್ನು ನೂರಾನಿಯಾ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ರಝಾಕ್ ಅಹ್ಸನಿ ಉದ್ಘಾಟಿಸಿದರು.
ನೂರಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪ್ರಶಾಂತ್ ಕಾಜವ, ಪಜೀರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಫೀಕ್ ಪಜೀರು, ನೂರಾನಿಯಾ ಜಮಾಅತ್ ಸಮಿತಿ ಕತ್ತರ್ ಸಮಿತಿಯ ಕೋಶಾಧಿಕಾರಿ ಎಸ್.ಕೆ.ಅಬ್ದುಲ್ ಖಾದರ್, ಕಟ್ಟಡ ಸಮಿತಿ ಅಧ್ಯಕ್ಷ ಮೂಸಾ ಕುಂಞಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಚ್.ಅಬ್ದುಲ್ಲಾ, ಗ್ರಾ.ಪಂ. ಸದಸ್ಯರಾದ ಶಫೀಕ್ ಅರ್ಕಾಣ, ಸಿರಾಜ್ ಅರ್ಕಾಣ, ಖತೀಬ್ ಹಾಫಿಲ್ ರಝಾಕ್ ಉಸ್ತಾದ್, ಸಮಾಜ ಸೇವಕ ಉಸ್ಮಾನ್ ಕೊಡಕ್ಕಲ್, ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಗೌರವಾಧ್ಯಕ್ಷ ಎ.ನಾಸೀರ್, ಮಾಜಿ ಅಧ್ಯಕ್ಷ ಅಬ್ದುಲ್ಲಾ, ಯೇನೆಪೊಯ ಆಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುಲ್ ರಝಾಕ್, ಎಚ್.ಬಿ.ಟಿ.ಅಮೀರ್ ಮೊದಲಾದವರು ಉಪಸ್ಥಿತರಿದ್ದರು.
ಅಸೋಸಿಯೇಷನ್ ಕಾರ್ಯದರ್ಶಿ ಸಂಶುದ್ದೀನ್ ಸ್ವಾಗತಿಸಿದರು. ನ್ಯಾಯವಾದಿ ಅಸ್ಗರ್ ಸಾಂಬಾರತೋಟ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ರೆಡ್ ಕ್ರಾಸ್ ವತಿಯಿಂದ ನೀಡಲಾದ ಗಾಲಿಕುರ್ಚಿ ವಿದ್ಯಾರ್ಥಿನಿ ಮಿಸ್ಬಾಳಿಗೆ ಹಸ್ತಾಂತರಿಸಲಾಯಿತು. ರಾಜ್ಯ ಮಟ್ಟದ ಟೇಕ್ವಾಂಡೋದಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿ ಅಯಾಝ್ ಮತ್ತು ಮಹಮ್ಮದ್ ಅನಸ್ ಇವರನ್ನು ಸನ್ಮಾನಿಸಲಾಯಿತು.