×
Ad

ಸಹ್ಯಾದ್ರಿ ಕಾಲೇಜಿನ ಹದಿನಾಲ್ಕನೇ ಪದವಿ ಪ್ರದಾನ ಸಮಾರಂಭ

Update: 2025-02-23 18:43 IST

ಮಂಗಳೂರು, ಫೆ.23: ಮಂಗಳೂರು ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ 14ನೇ ಪದವಿ ಪ್ರದಾನ ಸಮಾರಂಭವು ಇತ್ತೀಚೆಗೆ ನಡೆಯಿತು.

ಒಟ್ಟು 174 ಎಂಬಿಎ ವಿದ್ಯಾರ್ಥಿಗಳು, ಮೂರು ಎಂಟಿಕ್ ವಿದ್ಯಾರ್ಥಿಗಳು ಹಾಗೂ ಐದು ಪಿಎಚ್‌ಡಿ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪದವಿಯನ್ನು ಪಡೆದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿಯಾಗಿದ್ದ ಕಿಸ್ಕಿಂದ ಯುನಿವರ್ಸಿಟಿಯ ಉಪಕುಲಪತಿ ಡಾ. ಟಿ ಎನ್ ನಾಗಭೂಷಣ್ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ತಾಂತ್ರಿಕ ಪ್ರಗತಿ ಅಗತ್ಯತೆಯನ್ನು ವಿವರಿಸಿದರು.

ಇನ್ನೋರ್ವ ಅತಿಥಿ ಮುಂಬೈನ ಐಸಿಐಸಿಐ ಬ್ಯಾಂಕ್ ಲಿಮಿಟೆಡ್‌ನ, ಕನ್ಸಾಲಿಡೇಟೆಡ್ ಓವರ್‌ಸೀಸ್ ಫೈನಾನ್ಷಿಯಲ್ ರಿಪೋರ್ಟಿಂಗ್ ಮುಖ್ಯಸ್ಥೆ ಉಮಾ ಎ. ಮಾತನಾಡಿ ನಿರಂತರ ಕಲಿಕೆಯು ವೃತ್ತಿ ಯಶಸ್ಸಿನ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಸ್ ಎಸ್ ಇಂಜಗನೇರಿ, ರಿಸರ್ಚ್ ಡೈರೆಕ್ಟರ್ ಡಾ.ಮಂಜಪ್ಪ, ಎಂಬಿಎ ವಿಭಾಗದ ನಿರ್ದೇಶಕ ಡಾ. ವಿಶಾಲ್ ಸಮರ್ಥ ಹಾಗೂ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಡಾ. ಮುಸ್ತಫಾ ಬಸ್ತಿಕೋಡಿ ಅವರು ಉಪಸ್ಥಿತರಿದ್ದರು.

ಎಂಬಿಎ ಪದವಿಯಲ್ಲಿ ಸಂಜನಾ ಪ್ರಥಮ ರ್ಯಾಂಕೊನೊಂದಿಗೆ ಬಂಗಾರದ ಪದಕ ಪಡೆದರೆ ದೀಪ ಬಾಳಿಗಾ ಲಿಯೋ ಲಿಯೋನ ಮೆಲಿಸಾ ಕಾರ್ಡೋಜ ದ್ವಿತೀಯ ಹಾಗೂ ತೃತೀಯ ರಾಂಕ್ ಪಡೆದರು. ಇತ್ತೀಚೆಗೆ ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದ ಎಂಬಿಎ ವಿಭಾಗದ ಡಾ. ಸುಷ್ಮಾ, ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ.ರಿತೇಶ್ ಪಕ್ಕಳ, ಡಾ.ಪ್ರಖ್ಯಾತ ರೈ , ಡಾ. ಮೇಲ್ವಿನ್ ಡಿ ಸೋಜ ಹಾಗೂ ಡಾ. ರೋಹನ್ ಡೆನ್ ಸಲಿನ್ಸ್ ಇವರನ್ನು ಸನ್ಮಾನಿಸಲಾಯಿತು. 






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News