×
Ad

ಕೆರೆಕಾಡಿನಲ್ಲಿ ಗ್ರಾಮ ವಿಕಾಸ ಸಮಿತಿಯ ಸಂಯೋಜನೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

Update: 2025-02-23 20:05 IST

ಮುಲ್ಕಿ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಇದರ ಬಗ್ಗೆ ನಿರ್ಲಕ್ಷ ಸಲ್ಲದು, ಉತ್ತಮ ಪರಿಸರದೊಂದಿಗೆ ಸ್ವಚ್ಚತೆಯೊಂದಿಗೆ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದು ಮಂಗಳೂರಿನ ವೈದ್ಯೆ ಡಾ. ರಮ್ಯ ಹೇಳಿದರು.

ಅವರು ಮುಲ್ಕಿ ಬಳಿಯ ಕೆರೆಕಾಡು ಬೆಳ್ಳಾಯರುವಿನ ಶ್ರೀ ಸ್ವಾಮಿ ಕೊರಗಜ್ಜ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಮ್ರಾಲ್‌ನ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಾರ್ಗರೇಟ್ ಸುದರ್ಶಿನಿ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿದರು. 

ಮಂಗಳೂರಿನ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್, ಮೂಲ್ಕಿ ತಾಲ್ಲೂಕಿನ ಸೇವಾ ವಿಭಾಗ, ಕೆರೆಕಾಡು ಗ್ರಾಮ ವಿಕಾಸ ಸಮಿತಿ, ಕೆಟಿಎಂ ಫ್ರೆಂಡ್ಸ್ ಬೆಳ್ಳಾಯರು ಜಂಟಿಯಾಗಿ ಶಿಬಿರವನ್ನು ಆಯೋಜಿಸಿದ್ದವು.

ಸಾತ್ವಿಕ್ ಮಂಗಳೂರು, ಸಮುದಾಯ ಆರೋಗ್ಯ ಅಧಿಕಾರಿ ಕೋಮಲ, ಆಶಾ ಕಾರ್ಯಕರ್ತೆ ವನಜಾ, ಗ್ರಾಮ ವಿಕಾಸ ಸಮಿತಿಯ ಮಾಧವ ಶೆಟ್ಟಿಗಾರ್, ಕೆಟಿಎಂ ಫ್ರೇಂಡ್ಸ್‌ನ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೊರಗ ಕಾಲೋನಿಯ ಸಹಿತ ಕೆರೆಕಾಡಿನ ಗ್ರಾಮದ ನೂರಕ್ಕೆ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು. ಸತೀಶ್ ಸ್ವಾಗತಿಸಿದರು, ಯತೀಶ್ ವಂದಿಸಿದರು, ಹರ್ಷ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News