×
Ad

ಶ್ರೀರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಕಾರ್ಯಕ್ರಮ

Update: 2025-02-25 22:44 IST

ಮಂಗಳೂರು: ನಗರದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ ಮತ್ತು ಶಾಂಭವಿ ಭವನದ ಹಾಸ್ಟೆಲ್ ಡೇ ಕಾರ್ಯಕ್ರಮ ಮತ್ತು ಅಮೃತೋತ್ಸವ ಕಾರ್ಯಕ್ರಮವು ವಿದ್ಯಾರ್ಥಿನಿ ಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೆಯರ್ ಮೆನ್ ಡಾ.ಎಂ. ಮೋಹನ ಆಳ್ವ ಉದ್ಘಾಟಿಸಿದರು.

80 ವರ್ಷಗಳ ಇತಿಹಾಸ ಇರುವ ಬಂಟರ ಮಾತೃ ಸಂಘದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದಿಂದ ಬಹಳಷ್ಟು ಮಂದಿ ಹೆಣ್ಮಕ್ಕಳಿಗೆ ಇಲ್ಲಿ ಪ್ರಯೋಜವಾಗಿದೆ. ಪ್ರತೀ ವರ್ಷ ಹಾಸ್ಟೇಲ್ ಡೇ ಆಚರಿಸುವ ಮೂಲಕ ವಿದ್ಯಾರ್ಥಿನಿ ನಿಲಯದಲ್ಲಿ ಇಲ್ಲಿದ್ದ ಮಹಿಳೆಯರು ಮತ್ತೆ ಒಟ್ಟು ಸೇರುವ ಅವಕಾಶ ದೊರೆತಿದೆ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದಲ್ಲಿ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಹಾಗಾಗಿ ಇಲ್ಲಿಯ ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ನೆಯನ್ನು ಕಾಣಲು ಸಾಧ್ಯವಿದೆ ಎಂದರು.

ಅಮೃತಸಿರಿ ಸ್ಮರಣ ಸಂಚಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅನಾವರಣಗೊಳಿಸುವರು.

ಮುಖ್ಯ ಅತಿಥಿಗಳಾಗಿ ಮುಂಬೈನ ಅರ್ಗಾನಿಕ್ ಇಂಡಸ್ಟ್ರೀಸ್‌ನ ಶಶಿರೇಖಾ ಆನಂದ ಶೆಟ್ಟಿ, ಸೆಲೆಬ್ರಿಟಿ ಚೆಪ್ ಶ್ರೀಯಾ ಶೆಟ್ಟಿ, ಅಮತ ಬಿಲ್ಡ್ ಕೇರ್ ಸೊಲ್ಯೂಷನ್ ಪಾಲುದಾರರಾದ ಸಮೀಕ್ಷಾ ಶೆಟ್ಟಿ, ಕೊರಿಯೋಗ್ರಾಫರ್ ಪ್ರಮೋದ್ ಆಳ್ವ, ಬಂಟರ ಮಾತೃ ಸಂಘದ ಕೋಶಾಧಿಕಾರಿ ರಾಮ್ ಮೋಹನ್ ರೈ, ಜತೆ ಕಾರ್ಯದರ್ಶಿ ಸಂಪಿಗೆದಡಿ ಸಂಜೀವ ಶೆಟ್ಟಿ ಭಾಗವಹಿಸಿ ದ್ದರು. ವಿದ್ಯಾರ್ಥಿನಿ ನಿಲಯದ ಸಂಚಾಲಕಿ ಶಾಲಿನಿ ಶೆಟ್ಟಿ, ಕಾರ್ಯದರ್ಶಿ ಸಾರಿಕಾ ಭಂಡಾರಿ, ಕೋಶಾಧಿಕಾರಿ ಸವಿತಾ ಚೌಟ, ಜತೆ ಕಾರ್ಯದರ್ಶಿ ಶರ್ಮಿಳಾ ಶೆಟ್ಟಿ, ಸುಜಯ ರೈ, ಉಷಾ ಬಲ್ಲಾಲ್, ಡಾ ಆಶಾ ಜ್ಯೋತಿ ರೈ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿಯನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಳೆದು ಹೋದ ಸವಿನೆನಪುಗಳನ್ನು ಮೆಲುಕು ಹಾಕಿದರು.

ಹಾಸ್ಟೇಲ್ ನ ಸಂಚಾಲಕಿ ಶಾಲಿನಿ ಶೆಟ್ಟಿ ಸ್ವಾಗತಿಸಿದರು. ಜಯಂತಿ ಶೆಟ್ಟಿ ವರದಿ ವಾಚಿಸಿದರು. ವೀಣಾ ಶೆಟ್ಟಿ ವಂದಿಸಿದರು. ಆರ್ ಜೆ ನಯನಾ ಶೆಟ್ಟಿ ಮತ್ತು ಸುನಿಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃೃತಿಕ ಕಾರ್ಯಕ್ರಮವನ್ನು ಅರ್ಪಿತ ಮತ್ತು ವಿಭಾ ನಿರ್ವಹಿಸಿ, ಆಶಾಲತಾ ಶೆಟ್ಟಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News