×
Ad

ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಮಹಾ ಸಭೆ: ಪದಾಧಿಕಾರಿಗಳ ಆಯ್ಕೆ

Update: 2025-02-25 23:24 IST

ಹಸನ್ ಮುಸ್ಲಿಯಾರ್

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಮಹಾ ಸಭೆ ಅಬ್ದುಲ್ ಕರೀಂ ಪಕ್ಕಲಡ್ಕ ರವರ ಅಧ್ಯಕ್ಷ ತೆಯಲ್ಲಿ ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ.ಹಮೀದ್ ಬೆಂಗರೆ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಸಂಘಟನೆಯ ಬಗ್ಗೆ ವಿವರ ನೀಡಿದರು. ಅಧ್ಯಕ್ಷ ಬಾಷಣದೊಂದಿಗೆ ಹಳೆಯ ಸಮಿತಿ ಬರ್ಕಾಸ್ತು ಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ ರಾಗಿ ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಎ. ಹಮೀದ್ ಬೆಂಗರೆ, ಕೋಶಾಧಿಕಾರಿಯಾಗಿ ಹನೀಫ್ ಬಿಕರ್ನಕಟ್ಟೆ ಇವರನ್ನು ಆರಿಸಲಾಯಿತು.

ಉಪಾಧ್ಯಕ್ಷ ರಾಗಿ ಎಂ.ಪಿ.ಅಬೂಬಕ್ಕರ್ ಬೋಳಾರ್, ಕಾರ್ಯದರ್ಶಿಗಳಾಗಿ ಖಾಸಿಂ ಮುಸ್ಲಿಯಾರ್ ದ ಅ್ ವಾ, ಇಬ್ರಾಹಿಂ ಬೆಂಗ್ರೆ ಮೀಡಿಯಾ, ರಫೀಕ್ ಪಾಂಡೇಶ್ವರ್ ಇ‌ಸಾಬಾ/ಸಹಾಯ್, ಅಬ್ಬಾಸ್ ಹಾಜಿ ಬಿಜೈ, ಸಂಘಟನೆ ಹಾಗೂ ಹನ್ನೆರಡು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಮಂಗಳೂರು ಝೋನಲ್ ಸಮಿತಿಗೆ ಝೋನ್ ಕೌನ್ಸಿಲರುಗಳಾಗಿ ಹಸನ್ ಮುಸ್ಲಿಯಾರ್, ಬಿ.ಎ. ಅಬ್ದುಲ್ ಹಮೀದ್ ಬೆಂಗರೆ, ಹನೀಫ್ ಬಿಕರ್ನಕಟ್ಟೆ, ಅಬ್ದುಲ್ ಕರೀಂ ಹಾಜಿ ಪಕ್ಕಲಡ್ಕ, ಅಶ್ರಫ್ ಕಿನಾರ, ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ನಝೀರ್ ಬಜಾಲ್, ಇಬ್ರಾಹಿಂ ಮಂಗಳೂರು, ಎಂ.ಪಿ.ಅಬೂಬಕ್ಕರ್, ಹಾಜಿ ಶೇಖ್ ಬಾವ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News