ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‌ರ ಜನ್ಮ ಮಹೋತ್ಸವ
ಮಂಗಳೂರು: ನಗರದ ಬೆಥನಿ ಸಂಸ್ಥೆಯ ಸಂಸ್ಥಾಪಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‌ರ 150ನೇ ಜನ್ಮಮಹೋತ್ಸವ ಹಾಗೂ 125ನೇ ಗುರುದೀಕ್ಷಾ ಮಹೋತ್ಸವವು ಶುಕ್ರವಾರ ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಆಚರಿಸಲಾಯೊತು.
ಗೋವಾ ಮತ್ತು ಡಾಮನ್ ಆರ್ಚ್ ಬಿಷಪ್ ಫಿಲಿಪ್ ನೆರಿಕಾರ್ಡಿನಲ್ ಫೆರಾವೊ ಬಲಿಪೂಜೆ ನೆರವೇರಿಸಿದರು. ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ.ರೆ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಉಡುಪಿ ಧರ್ಮಪ್ರಾಂತದ ಬಿಷಪ್ ರೈ.ರೆ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತದ ಬಿಷಪ್ ರೈ.ರೆ. ಡಾ. ಫ್ರಾನ್ಸಿಸ್ ಸೆರಾವೋ, ಪುತ್ತೂರು ಸಿರೋ-ಮಲಂಕರ ಕೆಥೋಲಿಕ್ ಎಪಾರ್ಕಿ ಬಿಷಪ್ ರೈ.ರೆ. ಡಾ. ಗಿವರ್ಗೀಸ್ ಮಾರ್ಮಕಾರಿ ಯೋಸ್, ಮಂಗಳೂರು ಧರ್ಮಪ್ರಾಂತದ ನಿವೃತ್ತ ಬಿಷಪ್ ರೈ ರೆ.ಡಾ. ಅಲೋಸಿಯಸ್ ಪಾವ್ಲ್ ಡಿಸೋಜ, ಸುಪೀರಿಯರ್ ಜನರಲ್ ರೋಸ್ ಸೆಲೀನ್‌ಉಪಸ್ಥಿತರಿದ್ದರು.
ದಿವ್ಯ ಬಲಿಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ.ಮಸ್ಕರೇನ್ಹಸ್ ಅವರ ಜೀವನ ಚರಿತ್ರೆಯನ್ನು ವಿವರಿಸುವ 'ಈ ಮಣ್ಣಿನ ಸಂತ ಪುತ್ರ' ಎಂಬ ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.