ಕುತ್ತಾರ್: ಮುನ್ನೂರು ಗ್ರಾಪಂ ಸದಸ್ಯ ಆರ್‌ಕೆಸಿ ಅಝೀಝ್ ಹೃದಯಾಘಾತದಿಂದ ನಿಧನ
Update: 2025-03-05 20:40 IST
ದೇರಳಕಟ್ಟೆ: ಕುತ್ತಾರ್ ಸಮೀಪದ ಮದನಿನಗರ ನಿವಾಸಿ ಮುನ್ನೂರು ಗ್ರಾಪಂ ಸದಸ್ಯ ಆರ್.ಕೆ.ಸಿ. ಅಬ್ದುಲ್ ಅಝೀಝ್ (42) ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್ ಅಝೀಝ್ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿ ಕೊಂಡಿದ್ದರು. ಉದ್ಯಮಿಯೂ ಆಗಿದ್ದ ಅಬ್ದುಲ್ ಅಝೀಝ್ ಅವರು ಉತ್ತರ ಕನ್ನಡ ಜಿಲ್ಲೆಗೆ ಕಾರ್ಯನಿಮಿತ್ತ ತೆರಳಿದ ವೇಳೆ ರೈಲಿನಲ್ಲಿ ಹೃದಯಾಘಾತಕ್ಕೀಡಾದರು ಎಂದು ತಿಳಿದು ಬಂದಿದೆ.