×
Ad

ಕರಾವಳಿ ಕರ್ನಾಟಕದಲ್ಲಿ ಸಂಪರ್ಕವನ್ನು ಸುಧಾರಿಸಲು ಬಜೆಟ್‌ನಲ್ಲಿ ನಿರ್ದಿಷ್ಟ ಅನುದಾನ ಸ್ಪಷ್ಟಪಡಿಸಿಲ್ಲ: ಆನಂದ್ ಜಿ ಪೈ ಆರೋಪ

Update: 2025-03-07 18:18 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಮಾ.7: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ (ಸಿಎಂಐಡಿಪಿ) ಅಡಿಯಲ್ಲಿ 8,000 ಕೋಟಿ ರೂ. ಹಂಚಿಕೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ, ಆದರೆ ಕರಾವಳಿ ಕರ್ನಾಟಕದಲ್ಲಿ ಸಂಪರ್ಕವನ್ನು ಸುಧಾರಿಸಲು ಬಜೆಟ್‌ನಲ್ಲಿ ನಿರ್ದಿಷ್ಟ ಅನುದಾನದ ಸ್ಪಷ್ಟಪಡಿಸಿಲ್ಲ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಆನಂದ್ ಜಿ ಪೈ ಹೇಳಿದ್ದಾರೆ.

ಮಂಗಳೂರು- ಕಾರವಾರ ಕರಾವಳಿ ಹೆದ್ದಾರಿ ವಿಸ್ತರಣೆ ಮತ್ತು ನವ ಮಂಗಳೂರು ಬಂದರಿನ ಆಧುನೀಕರಣಕ್ಕೆ ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಬೆಂಬಲಿಸಲು ತುರ್ತು ಗಮನದ ಅಗತ್ಯವಿದೆ.

ಮೀನುಗಾರಿಕೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು 30 ಕೋಟಿ ರೂ . ಮೀಸಲು . ಲಾಜಿಸ್ಟಿಕ್ಸ್, ಒಳನಾಡು ಸಂಪರ್ಕ ಮತ್ತು ರೈಲ್ವೆ ಸರಕು ಸಾಗಣೆ ಸೌಲಭ್ಯಗಳಲ್ಲಿ ಹೆಚ್ಚಿನ ಹೂಡಿಕೆಗಳು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಅಂತರ್‌ರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಮತ್ತು ವಾಟರ್ ಮೆಟ್ರೋ ಯೋಜನೆಗಳನ್ನು ಒಳಗೊಂಡಿರುವ ಜಲ ಸಾರಿಗೆ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ. ಆದಾಗ್ಯೂ, ಅದರ ಪರಿಣಾಮ ಕಾರಿ ಅನುಷ್ಠಾನ ಮತ್ತು ಹಣಕಾಸು ಹಂಚಿಕೆ ಸ್ಪಷ್ಟವಾಗಿಲ್ಲ.

ಎಂಎಸ್‌ಎಂಇ, ಪ್ರವಾಸೋದ್ಯಮ ಮತ್ತು ಐಟಿ /ಬಿಟಿ ವಲಯಗಳಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ರಾಜ್ಯದ ಒತ್ತು ಶ್ಲಾಘನೀಯ. ಕೃಷಿ ವಲಯಕ್ಕೆ ರೂ 51,339 ಕೋಟಿ ಹಂಚಿಕೆ ಉತ್ತೇಜನಕಾರಿಯಾಗಿದೆ. ವಿಮಾನಯಾನ ಇಂಧನ ತೆರಿಗೆ ಕಡಿತವು ಸ್ವಾಗತಾರ್ಹ, ಮಂಗಳೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ವನ್ನು ಸ್ಥಾಪಿಸುವ ಕಿಯೋನಿಕ್ಸ್ ಯೋಜನೆಯು ಪ್ರಗತಿಪರ ಕ್ರಮವಾಗಿದೆ. ಈ ಪ್ರದೇಶದಲ್ಲಿ ಹೂಡಿಕೆ ಮಾಡಲು ಐಟಿ ಮತ್ತು ಫಿನ್‌ಟೆಕ್ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ನಾವು ಸರಕಾರವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಕಡಲು ಕೊರೆತವನ್ನು ಕಡಿಮೆ ಮಾಡಲು ರೂ.200 ಕೋಟಿ ಮೀಸಲು, , ಕೃಷಿ ವಲಯಕ್ಕೆ ರೂ. 51,339 ಕೋಟಿ ಹಂಚಿಕೆ ಉತ್ತೇಜನಕಾರಿಯಾಗಿದೆ. ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ಸ್ವಾಗತಾರ್ಹ ಕ್ರಮವಾಗಿದೆ, ಆದರೆ ಸುಸ್ಥಿರ ಮೀನುಗಾರಿಕೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಹೆಚ್ಚುವರಿ ಹಣದ ಅಗತ್ಯವಿದೆ.

ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕಾಗಿ ನಿಗದಿಪಡಿಸಿದ ರೂ. 3 ಕೋಟಿ ಒಂದು ಸಕಾರಾತ್ಮಕ ಕ್ರಮ ವಾಗಿದೆ, ಆದರೆ ಸಮಗ್ರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣದ ಅಗತ್ಯವಿದೆ.

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತ ತಡೆಗಟ್ಟುವಿಕೆಗಾಗಿ 200 ಕೋಟಿ ರೂ. ಹಂಚಿಕೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News