×
Ad

ಕೂಳೂರು ಕೆಐಒಸಿಎಲ್ ಬಳಿ ಏರ್‌ಟೆಲ್ ಇಂಡಿಯಾ ಕಾಮಗಾರಿ; ನೀರು ಪೂರೈಕೆ ಪೈಪ್‌ಲೈನ್‌ಗೆ ಹಾನಿ

Update: 2025-03-08 19:41 IST

ಮಂಗಳೂರು : ಕೂಳೂರಿನ ಕೆಐಒಸಿಎಲ್ ಬಳಿ ಎರ್‌ಟೆಲ್ ಇಂಡಿಯಾ ಸಂಸ್ಥೆಯ ಕಾಮಗಾರಿಯಿಂದ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸರಬರಾಜು ಮಾಡಲಾಗುವ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ನೀರು ಸೋರಿಕೆಯಾಗುತ್ತಿದೆ.

ಇದರಿಂದಾಗಿ ಸುರತ್ಕಲ್, ಕಾಟಿಪಳ್ಳ, ಎನ್‌ಐಟಿಕೆ, ಎಂಸಿಎಫ್, ಕಾಪಿಕಾಡ್, ಕೂಳೂರು, ಜಲ್ಲಿಗುಡ್ಡೆ, ಕಾವೂರು ಭಾಗಶ:, ಕೋಡಿಕಲ್ ಭಾಗಶ:, ಪಚ್ಚನಾಡಿ, ಅಶೋಕನಗರ, ಮೂಡ ಪಂಪ್‌ಹೌಸ್, ದೇರೆಬೈಲ್, ಕುಳಾಯಿ, ಮುಕ್ಕ, ಪಣಂಬೂರು ಮೊದಲಾದ ಪ್ರದೇಶಗಳಲ್ಲಿ ನೀರು ನಿಲುಗಡೆಗೊಳಿಸಲಾ ಗುತ್ತಿದೆ. ಇದರಿನ ನೀರಿನ ಪೂರೈಕೆಯಲ್ಲಿ ಮುಂದಿನ ಎರಡು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.

‘ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದು ಏರ್‌ಟೆಲ್‌ನವರು ಅಲ್ಲಿ ಕಾಮಗಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪಾಲಿಕೆಯಿಂದ ಅನುಮತಿಯಾಗಲಿ, ಯಾವುದೇ ಮಾಹಿತಿಯನ್ನಾಗಲಿ ನೀಡಿಲ್ಲ. ಕಾಮಗಾರಿಯ ವೇಳೆ ಪಾಲಿಕೆಯ ನೀರು ಪೂರೈಕಯ 18 ಎಂಜಿಡಿ ಪ್ರಮುಖ ಲೈನ್‌ನ 900 ಎಂಎಂ ಪೈಪ್‌ಲೈನ್‌ಗೆ ಹಾನಿಯಾಗಿದೆ. ಪೈಪ್‌ಲೈನ್ ದುರಸ್ತಿ ಆಗುವವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ’ ಎಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News