ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ ಅವರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ
ಬಂಟ್ವಾಳ : ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.