×
Ad

ಬಿಎಚ್‌ಎಂ ಪರೀಕ್ಷೆ: ನಿಟ್ಟೆಯ ಸರೋಶ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಶನ್‌ ವಿದ್ಯಾರ್ಥಿಗಳ ಸಾಧನೆ

Update: 2025-03-11 19:55 IST

ಕೊಣಾಜೆ: ನಿಟ್ಟೆಯ ಸರೋಶ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಶನ್‌( ನಿಟ್ಟೆ ಇನ್ಸ್‌ಟಿಟ್ಯೂಟ್‌ ಆಫ್‌ ಹಾಸ್ಪಿಟಾಲಿಟಿ ಸರ್ವಿಸಸ್‌) ವಿದ್ಯಾರ್ಥಿಗಳು 2024ರ ಜುಲೈನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ ಬಿಎಚ್‌ಎಂ ಪದವಿಯ ಅಂತಿಮ ಪರೀಕ್ಷೆಯಲ್ಲಿ ಮೊದಲ ಮೂರು ಶ್ರೇಯಾಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ದೇವ ಎಲ್ವಿನ್‌ ಪಿಂಟೋ ಸರಾಸರಿ 89.02% ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರೆ, ಗ್ರೇಶಲ್‌ ಇನೆಶ್‌ ರಾಡ್ರಿಗಸ್‌ 86.83% ಪಡೆದು ಎರಡನೆಯ ಸ್ಥಾನ ಪಡೆದಿದ್ದಾರೆ. ಶ್ರೇಯಾ ಜುವಿಟ ಲೋಬೊ 80.94% ಅಂಕಗಳನ್ನು ಪಡೆದು ಮೂರನೆಯ ಸ್ಥಾನದಲ್ಲಿದ್ದಾರೆ.

ನಿಟ್ಟೆ ಇನ್ಸ್‌ಟಿಟ್ಯೂಟ್‌ ಆಫ್‌ ಹಾಸ್ಪಿಟಾಲಿಟಿ ಸರ್ವಿಸಸ್‌ ಮಂಗಳೂರಿನ ಪಡೀಲಿನಲ್ಲಿದ್ದು ಹೋಟೆಲ್‌ ಮ್ಯಾನೇಜ್‌ಮೆಂಟ್‌, ಕುಲಿನರಿ ಆರ್ಟ್ಸ್‌ ಮತ್ತು ಮ್ಯಾನೇಜ್‌ಮೆಂಟ್‌ ಹಾಗೂ ಏರ್‌ಲೈನ್ಸ್‌, ಟೂರಿಸಂ ಮತ್ತು ಹಾಸ್ಪಿಟಾಲಿಟಿಯಲ್ಲಿ ನಾಲ್ಕು ವರ್ಷದ ಬಿಎಸ್ಸಿ ಆನರ್ಸ್‌ ಅಧ್ಯಯನ ವಿಭಾಗಗಳನ್ನು ಒದಗಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News