×
Ad

ಮಂಗಳೂರು| ಉತ್ಪನ್ನ ಪೂರೈಕೆ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚನೆ: ಪ್ರಕರಣ ದಾಖಲು

Update: 2025-03-13 21:42 IST

ಮಂಗಳೂರು, ಮಾ.13:ಚೈನಿ ಟೊಬ್ಯಾಕೋ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ಹೇಳಿ ಹಣವನ್ನು ಪಡೆದು ವಂಚಿಸಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವರ್ಷದ ಜನವರಿಯಲ್ಲಿ ಮೋಹಿತ್ ಕುಮಾರ್ ಉಪಾದ್ಯಾಯ ಎಂಬಾತ ತನ್ನ ಅಂಗಡಿಗೆ ಬಂದು ತಾನು ಚೈನಿ ಕಂಪೆನಿಯ ಅಧಿಕೃತ ಸೇಲ್ಸ್ ರೆಪ್ರೆಸೆಂಟಿಟಿವ್ ಆಗಿರುವುದಾಗಿ ಪರಿಚಯಿಸಿಕೊಂಡು ಚೈನಿ ಟೊಬ್ಯಾಕೋ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಪೂರೈಕೆ ಮಾಡುವುದಾಗಿ ನಂಬಿಸಿ ತನ್ನಿಂದ 71,010 ರೂ.ವನ್ನು ಪಡೆದು ಬಳಿಕ ಉತ್ಪನ್ನಗಳನ್ನು ನೀಡದೆ ವಂಚಿಸಿದ್ದಾನೆ. ಹಣವನ್ನು ಮರಳಿಸುವಂತೆ ಕೇಳಿದಾಗ ಜೀವಬೆದರಿಕೆ ಹಾಕಿರುವುದಾಗಿ ಅಂಗಡಿಯೊಂದರ ಮಾಲಕ ಮುಹಮ್ಮದ್ ಮುಸ್ತಾಕ್ ದೂರು ನೀಡಿದ್ದಾರೆ.

ಈ ಆರೋಪಿಯು ತನ್ನ ಪರಿಚಯದ ಕೆ.ಸಿ. ರೋಡ್‌ನ ಫೈರೋಝ್ ಆಲಿ ಖಾನ್‌ಗೂ ಚೈನಿ ಟೊಬ್ಯಾಕೋ ಉತ್ಪನ್ನಗಳನ್ನು ಪೂರೈಕೆ ಮಾಡುವುದಾಗಿ ನಂಬಿಸಿ 2.50 ಲಕ್ಷ ರೂ.ಮತ್ತು ಪಪ್ಪುಎಂಬವರಿಗೆ 1,60,685 ರೂ.ವನ್ನು ಪಡೆದುಕೊಂಡು ವಂಚಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News