×
Ad

ಮಂಗಳನಗರ: ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಅರಿವು ಕಾರ್ಯಕ್ರಮ

Update: 2025-03-16 21:22 IST

ಉಳ್ಳಾಲ, ಮಾ.16: ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಕೆಜೆಎಂ) ಕಿನ್ಯ ರೇಂಜ್ ಇದರ ಜಂಟಿ ಆಶ್ರಯದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಅರಿವು ಕಾರ್ಯಕ್ರಮ ಮಂಗಳನಗರದ ಜಾಮಿಯಾ ಮಸ್ಜಿದುನ್ನೂರ್ ವಠಾರದಲ್ಲಿ ನಡೆಯಿತು.

ವಾದಿತ್ತೈಭಾ ಕಿನ್ಯ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಅಧ್ಯಕ್ಷ ಸಯ್ಯದ್ ಅಮೀರ್ ತಂಙಳ್ ಕಿನ್ಯ ದುಆಗೈದರು.

ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕಿನ್ಯ ರೇಂಜ್ ಅಧ್ಯಕ್ಷ ಇಬ್ರಾಹೀಂ ಕೊಣಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಝಿಕ್ಕೋಡ್ ನಂದಿ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನ್ಯಾಯವಾದಿ ಇಬ್ರಾಹಿಮ್ ಪಳ್ಳಂಗೋಡು ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮಾಹಿತಿ ನೀಡಿದರು.

ಮಂಗಳನಗರ ಜಾಮಿಯಾ ಮಸ್ಜಿದುನ್ನೂರ್ ಖತೀಬ್ ಆಸಿಫ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ದ.ಕ.ಜಿಲ್ಲಾಧ್ಯಕ್ಷ ಎಂ.ಎಚ್. ಹಾಜಿ, ಜಿಲ್ಲಾ ಉಪಾಧ್ಯಕ್ಷರಾದ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್, ಶಾಹುಲ್ ಹಮೀದ್ ಹಾಜಿ ಮೆಟ್ರೋ, ಜಾಮಿಯಾ ಮಸ್ಜಿದುನ್ನೂರ್ ಅಧ್ಯಕ್ಷ ಮೊಹಿದಿನ್ ಬಾವು ಮರಾಠಿಮೂಲೆ, ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ದೇರಳಕಟ್ಟೆ ರೇಂಜ್ ಮಾಜಿ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ, ದೇರಳಕಟ್ಟೆ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಸಿ.ಎಂ. ಶರೀಫ್, ಕಿನ್ಯ ರೇಂಜ್ ಕೋಶಾಧಿಕಾರಿ ಹಾಜಿ ಕೆ.ಎಂ.ಮೊಹಿದಿನ್ ಕುಂಞಿ, ಜಂ ಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಕೋಶಾಧಿಕಾರಿ ಹನೀಫ್ ಎಸ್.ಬಿ, ದೇರಳಕಟ್ಟೆ ರೇಂಜ್ ಕೋಶಾಧಿಕಾರಿ ಅಬೂಬಕ್ಕರ್ ಸ್ವಾಗತ್,ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ದ.ಕ. ಕೌನ್ಸಿಲರ್ ಅಶ್ರಫ್ ಮರಾಠಿಮೂಲೆ, ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ವ್ಯವಸ್ಥಾಪಕ ಖಾದರ್ ಫೈಝಿ, ಜಲಾಲ್‌ಬಾಗ್, ಮಸ್ಜಿದುಲ್ ಅರಫಾ ಖತೀಬ್ ಅಬ್ದುರ‌್ರಹ್ಮಾನ್ ಫೈಝಿ, ಜಾಮಿಯಾ ಮಸ್ಜಿದುನ್ನೂರ್ ಕಾರ್ಯದರ್ಶಿ ರಿಯಾಝ್ ಮರಾಠಿಮೂಲೆ ಉಪಸ್ಥಿತರಿದ್ದರು.

ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಸ್ವಾಗತಿಸಿದರು. ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕಿನ್ಯ ರೇಂಜ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News