ಬೆಂದೂರಿನಲ್ಲಿ ಮಹಿಳಾ ದಿನಾಚರಣೆ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಆಯೋಗ ಆಶ್ರಯದಲ್ಲಿ ಬೆಂದೂರಿನ ಸಂತ ಸೆಬಾಸ್ಟಿಯನ್ ಶತಮಾನೋತ್ಸವ ಸಭಾಂಗಣದಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಿಂಗ ಸಮಾನತೆ ಯನ್ನು ಬೆಳೆಸಲು ಧರ್ಮಸಭೆಯ ಬದ್ಧತೆಯನ್ನು ಪುನರುಚ್ಚರಿಸಿದರು.
ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ‘ಮಾತ್ರೋನ್ನತಿ ನಿಧಿ’ಗೆ ಬಿಷಪ್ ಚಾಲನೆ ನೀಡಿದರು. ಮಹಿಳಾ ಬೆಂಬಲ ಜಾಲ ಜಾಲವಾದ ‘ಮಹಿಳಾ ಸಂಪರ್ಕ’ವನ್ನು ಫಾ. ಫಾವುಸ್ತಿನ್ ಲೋಬೋ ಉದ್ಘಾಟಿಸಿದರು.
ಸಿಸ್ಟರ್ ನ್ಯಾನ್ಸಿ ಲೋಬೋ ಅವರು ಮಹಿಳಾ ಆಯೋಗದ ಅಧಿಕೃತ ವೆಬ್‌ಸೈಟ್ ಅನ್ನು (www.wcmangalore.in) ಅನಾವರಣಗೊಳಿಸಿದರು. ಪ್ರೊ. ಎಡ್ಮಂಡ್ ಫ್ರ್ಯಾಂಕ್, ಜಾನ್ ಸ್ಯಾಮ್ಯುಯೆಲ್ ಮತ್ತು ಎಂಸಿಸಿ ಅಧ್ಯಕ್ಷ ಅನಿಲ್ ಲೋಬೋ ನಿಧಿಗೆ ಕೊಡುಗೆ ನೀಡಿದರು.
ಮಹಿಳೆಯರಿಗೆ ಅವರ ಸಬಲೀಕರಣ ಪ್ರಯಾಣದಲ್ಲಿ ಮಾರ್ಗದರ್ಶನ ನೀಡಲು 13 ಸದಸ್ಯರ ಸಂಪನ್ಮೂಲ ತಂಡವನ್ನು ಪರಿಚಯಿಸಲಾಯಿತು.
ಮಾನಿಣಿ ಮಹಿಳಾ ರಾಜ್ಯಮಟ್ಟದ ಒಕ್ಕೂಟದ ಸಂಪನ್ಮೂಲ ಕ್ರೋಢೀಕರಣ ಅಧಿಕಾರಿ ಜಾನೆಟ್ ಬಾರ್ಬೋಜ ಮುದರಂಗಡಿ ಮುಖ್ಯ ಅತಿಥಿಗಳಾಗಿದ್ದರು.
ಸಿಸಿಬಿಐ ಮಹಿಳಾ ಆಯೋಗದ ಕಾರ್ಯಕಾರಿ ಕಾರ್ಯದರ್ಶಿ ಸಿಸ್ಟರ್ ಲಿಡ್ವಿನ್ ಫೆನಾರ್ಂಡಿಸ್, ಕರ್ನಾಟಕ ಪ್ರದೇಶ ಮಹಿಳಾ ಆಯೋಗದ ಕಾರ್ಯಕಾರಿ ಕಾರ್ಯದರ್ಶಿ ಸಿಸ್ಟರ್ ನ್ಯಾನ್ಸಿ ಲೋಬೊ, ಧರ್ಮಪ್ರಾಂತ್ಯದ ಪಾಲನಾ ಆಯೋಗಗಳ ಸಂಯೋಜಕಿ ಫಾ. ಫಾವುಸ್ತಿನ್ ಲೋಬೋ, ಬೆಂದೂರು ಚರ್ಚ್‌ನ ಧರ್ಮಗುರು, ಫಾ. ವಾಲ್ಟರ್ ಡಿ ಸೋಜ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ಟೆಲಿನೋ, ಸಿಒಡಿಪಿ ನಿರ್ದೇಶಕ ಫಾ. ವಿನ್ಸೆಂಟ್ ಡಿ ಸೋಜ, ಕೆನರಾ ಸಂವಹನ ಕೇಂದ್ರದ ನಿರ್ದೇಶಕ ಫಾ. ಅನಿಲ್ ಐವನ್ ಫೆನಾರ್ಂಡಿಸ್, ಸಿಸ್ಟರ್ ಸೆವ್ರಿನ್ ಮಿನೆಜಸ್, ಫಾ. ಫ್ರಾನ್ಸಿಸ್ ಡಿ ಸೋಜ ಮತ್ತು ಫಾ. ವಿವೇಕ್ ಪಿಂಟೊ ಮತ್ತಿತರು ಉಪಸ್ಥಿತರಿದ್ದರು.
ಉಷಾ ಫೆನಾರ್ಂಡಿಸ್ ಸ್ವಾಗತಿಸಿದರು, ಜೇಷ್ಮಾ ಡಿ ಸೋಜ ಅವರು ಮಹಿಳಾ ಸಬಲೀಕರಣಕ್ಕಾಗಿ ಆಯೋಗದ ವತಿಯಿಂದ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಒಳನೋಟವುಳ್ಳ ವರದಿಯನ್ನು ನೀಡಿದರು.