×
Ad

ಮುಹಮ್ಮದ್ ನಿಶ್ವಾನ್‌ಗೆ ಎನ್‌ಎಸ್‌ಎಸ್ ಸ್ವಯಂ ಸೇವಕ ಪ್ರಶಸ್ತಿ

Update: 2025-03-18 18:03 IST

ಮಂಗಳೂರು, ಮಾ.18: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಅಂತಿಮ ವರ್ಷದ ಎಂಬಿಎ ಮತ್ತು ಸಿಎಂಎ ವಿದ್ಯಾರ್ಥಿ ಮುಹಮ್ಮದ್ ನಿಶ್ವಾನ್ 2022-23ನೇ ಸಾಲಿನ ಎನ್‌ಎಸ್‌ಎಸ್ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೋಮವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.

ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಗಾಂಧಿನಗರದ ನಿವಾಸಿ ಉಸ್ಮಾನ್ ಹಾಗೂ ನಫೀಸಾ ಶೀಬಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ನಿಶ್ವಾನ್ ಬಹುಮುಖ ಪ್ರತಿಭೆಗಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರೀಯ ಯುವ ಸಂಸದ್‌ನಲ್ಲಿ ಕರ್ನಾಟಕದ ಪ್ರತಿನಿಧಿ ಯಾಗಿ ಭಾಗವಹಿಸಿದ್ದರು. ಕಾಲೇಜಿನ ಕಲಿಕೆಯಲ್ಲಿ ಟಾಪರ್ ಆಗಿ, ಸಾಂಸ್ಕೃತಿಕ ರಂಗ, ಸೇವಾರಂಗದ ಉತ್ತಮ ಸಾಧನೆಗಾಗಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಗೌರವಕ್ಕೂ ಪಾತ್ರರಾಗಿದ್ದಾರೆ.

*ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್, ರಾಜ್ಯ ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರಾದ ಎನ್.ಎ. ಹಾರೀಶ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ, ಮಾಜಿ ಶಾಸಕ ಹರೀಶ್ ಕುಮಾರ್ ಮತ್ತಿತರರು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News