×
Ad

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್‌ನ ಮಾಜಿ ಅಧ್ಯಕ್ಷರಿಗೆ ಶ್ರದ್ಧಾಂಜಲಿ

Update: 2025-03-18 22:47 IST

ಮಂಗಳೂರು: ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷ ದಿ.ಕಾಸ್ಮಿರ್ ಮಿನೇಜಸ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡಗೆಯನ್ನು ಪರಿಗಣಿಸಿ ಧೀರ್ ತಾಂಡೆಲಿ ಬಿರುದು ನೀಡಿ ಗೌರವಿಸುವ ಕಾರ್ಯಕ್ರಮವು ಸೋಮವಾರ ಬಿಜೈ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಹಾಗೂ ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಆಧ್ಯಾತ್ಮಿಕ ನಿರ್ದೇಶಕ ವಂ.ಡಾ. ಜೆ.ಬಿ.ಸಲ್ಡಾನ್ಹಾ ಮತ್ತು ಎಪಿಸ್ಕೊಪಾಲ್ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂ. ಜೋನ್ ವಾಸ್ ಬಲಿಪೂಜೆ ನೆರವೇರಿಸಿದರು. ಖಜಾಂಚಿ ಮೆಲ್ರಿಡಾ ರೊಡ್ರಿಗಸ್ ಮೃತರಿಗೆ ನೀಡಿದ ಬಿರುದನ್ನು ವಾಚಿಸಿದರು.

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮತ್ತು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇದರ ಎಲ್ಲಾ ಮಾಜಿ ಅಧ್ಯಕ್ಷರು, ಪ್ರಸ್ತುತ ಪದಾಧಿಕಾರಿಗಳು ಮತ್ತು ವಿವಿಧ ಚರ್ಚ್‌ಗಳಿಂದ ಬಂದ ಕೆಥೊಲಿಕ್ ಸಭಾದ ಸದಸ್ಯರುಗಳು ಭಾಗವಹಿಸಿದ್ದರು.

ಕೆಥೊಲಿಕ್ ಸಭಾ ಮಂಗ್ಳುರ್ ಪದೇಶ್ (ರಿ) ಇದರ ಅಧಕ್ಷ ಆಲ್ವಿನ್ ಡಿಸೋಜ ಪಾನೀರ್, ಕಾರ್ಯಕ್ರಮದ ಸಂಚಾಲಕ ಪೌಲ್ ರೋಲ್ಫಿ ಡಿಕೋಸ್ತಾ ಸಂದೇಶ ನೀಡಿದರು. ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೆರೊ ವಂದಿಸಿದರು. ಸಹ ಖಜಾಂಚಿ ವಿಲ್ಫ್ರೆಡ್ ಆಲ್ವಾರಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News