×
Ad

ಬಜಾಲ್ ನಂತೂರು ಜಮಾಅತ್‌ನಿಂದ ತೋಟ ಹೌಸ್‌ಗೆ ನೂತನ ರಸ್ತೆ ನಿರ್ಮಾಣ

Update: 2025-04-04 19:05 IST

ಮಂಗಳೂರು, ಎ.4: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸದ ವತಿಯಿಂದ ಸಮಾರು 12 ಲಕ್ಷ ರೂ. ವೆಚ್ಚದಲ್ಲಿ ತೋಟ ಹೌಸ್‌ಗೆ ನಿರ್ಮಿಸಲಾದ ನೂತನ ರಸ್ತೆಯನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್‌ರ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ಕೆ.ಇ.ಅಶ್ರಫ್ ಉದ್ಘಾಟಿಸಿದರು.

ಖತೀಬ್ ಅಬ್ದುನ್ನಾಸಿರ್ ಸಅದಿ ದುಆಗೈದರು. ಅತಿಥಿಗಳಾಗಿ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಬಿ.ಎನ್. ಅಬ್ಬಾಸ್, ಸಂಚಾಲಕ ಬಿ. ಫಕ್ರುದ್ದೀನ್, ತಾಪಂ ಮಾಜಿ ಸದಸ್ಯ ಅಹ್ಮದ್ ಬಾವ, ಮಾಜಿ ಕಾರ್ಯದರ್ಶಿ ಮೊಯ್ದೀನ್ ಕುಂಞಿ, ಬಿಜೆಎಂ ಮಾಜಿ ಸದಸ್ಯ ಅಬ್ದುಲ್ ಖಾದರ್ ಕೆಳಗಿನ ಮನೆ, ಮಸೀದಿಯ ಉಪಾಧ್ಯಕ್ಷ ಹಾಜಿ ಎಚ್.ಎಸ್. ಹನೀಫ್, ಕೋಶಾಧಿಕಾರಿ ಅಬ್ದುಸ್ಸಲಾಂ, ಎಂ. ಎಚ್. ಮುಹಮ್ಮದ್ ಫೈಸಲ್ ನಗರ, ಫೈಸಲ್ ನಗರ ಗೌಸಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಶಾಂತಿನಗರ ತರ್ಬಿಯತುಲ್ ಇಸ್ಲಾಂ ಮಸೀದಿಯ ಅಧ್ಯಕ್ಷ ಇಕ್ಬಾಲ್, ಬಿಜೆಎಂ ಉಸ್ತುವಾರಿ ನಝೀರ್ ಬಜಾಲ್ ಹಾಗೂ ಹಸನಬ್ಬ ಮೋನು, ಬಿಜೆಎಂ ಸದಸ್ಯ ತೋಟ ಅಶ್ರಫ್, ಜೊತೆ ಕಾರ್ಯದರ್ಶಿ ಅಬ್ದುಲ್ ರವೂಫ್ ಶಾಂತಿನಗರ, ಯೂಸುಫ್ ಶಾಂತಿನಗರ, ಹನೀಫ್ ಕೆಳಗಿನ ಮನೆ, ಇಕ್ಬಾಲ್ ಅಹ್ಸನಿ, ನಝೀರ್ ಪಾಂಡೇಲ್, ಅಬ್ಬಾಸ್ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News