×
Ad

ದಾರುನ್ನೂರ್: ಹುದವಿ ಪದವಿಗಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Update: 2025-04-07 22:50 IST

ಮಂಗಳೂರು : ದಾರುನ್ನೂರ್ ನಲ್ಲಿ ಹತ್ತು ವರ್ಷ ದಾರಾನಿ ವ್ಯಾಸಂಗ ಮುಗಿಸಿ ಹುದವಿ ಪದವಿಗಾಗಿ ದಾರುಲ್ ಹುದಾ ವಿಶ್ವವಿದ್ಯಾಲಯ ಚೆಮ್ಮಾಡ್ ಪ್ರವೇಶ ಪಡೆದಿರುವ ವಿದ್ಯಾರ್ಥಿ ಗಳಿಗೆ ಬೀಳ್ಕೊಡುಗೆ ಸಮಾರಂಭವು (Farewell and Alumini) ಇಂದು ಮಂಗಳೂರುನ ವೈಟ್ ಸ್ಟೋನ್ ಟವರ್ ನಲ್ಲಿ ದಾರುನ್ನೂರು ಕೇಂದ್ರ ಸಮಿತಿಯ ಗೌರವಧ್ಯಕ್ಷರಾದ  ಶರೀಫ್ ಹಾಜಿ ವೈಟ್ ಸ್ಟೋನ್ ಅದ್ಯಕ್ಷತೆಯಲ್ಲಿ ನಡೆಯಿತು.

ದಾರುನ್ನೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನ ತ್ವಾಕ ಅಹ್ಮದ್ ಮುಸ್ಲಿಯಾರ್ ರವರು ದುಹಾ ನೆರೆವೇರಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಪ್ರಾಂಶುಪಾಲರಾದ ಅಮೀನ್ ಹುದವಿ ಪ್ರಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಗಳಾಗಿ ಉದ್ಯಮಿ ಆಸೀಫ್ ಡೀಲ್ಸ್, ದಾರುನ್ನೂರು ಸದ್ರ್ ಮುದರಿಸ್ ಹುಸೈನ್ ರಹ್ಮಾನಿ, ದಾರುನ್ನೂರು ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ ಭಾಗವಹಿಸಿದ್ದರು.

ದಾರುನ್ನೂರು ಪಿ. ಟಿ. ಎ ಪ್ರಧಾನ ಕಾರ್ಯದರ್ಶಿ ನಝಿರ್ ಅಝರಿ ಮತ್ತು ಇಕ್ಬಾಲ್ ಬಾಳಿಲ ಸಾಂದರ್ಭಿ ಕವಾಗಿ ಮಾತನಾಡಿದರು. ಈ ಸಂದರ್ಭ ದಾರುನ್ನೂರು ಕೇಂದ್ರ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸೌದಿ ಅರೇಬಿಯಾದ ಅನಿವಾಸಿ ಉದ್ಯಮಿಗಳು, ದಾರಾನಿ ಬಿರಿದುದಾರಿಗಳು, ದಾರುನ್ನೂರು ಹಿತೈಷಿ ಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಾರುನ್ನೂರು ಹಳೆವಿದ್ಯಾರ್ಥಿ ಸಂಘಟನೆ ಯನ್ನು ರುಪೀಕರಿಸಿ ಅದರ ಪದಾಧಿಕಾರಿಗಳನ್ನು ಸರ್ವನುಮತದಿಂದ ಆಯ್ಕೆ ಮಾಡಲಾ ಯಿತು. ದಾರುನ್ನೂರು ಪಿ. ಟಿ. ಎ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್ ಸ್ವಾಗತಿಸಿ, ಸಂಸ್ಥೆಯ ವ್ಯವಸ್ಥಾಪಕರಾದ ಅಬ್ದುಲ್ ಹಕೀಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News