ಉಳ್ಳಾಲ ಹಳೆಕೋಟೆ ಶಾಲೆಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ
Update: 2025-04-14 15:49 IST
ಮಂಗಳೂರು, ಎ.14: ಉಳ್ಳಾಲ ಹಳೆಕೋಟೆಯ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ರ ಜನ್ಮದಿನವನ್ನು ಸೋಮವಾರ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಸಂದೇಶ ನೀಡಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು, ಬಿಸಿಯೂಟದ ಸಿಬ್ಬಂದಿ ವರ್ಗ, ಶಿಕ್ಷಕಿಯರಾದ ಸಪ್ನಾ, ಹಸಿನ್ ತಾಜ್, ಬಬಿತಾ ಸಲಿನ್ ಡಿಸೋಜ, ವೀಣಾ, ಸುಮಾ, ಮೋನಿಷ ಉಪಸ್ಥಿತರಿದ್ದರು.