×
Ad

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಜಾಥ

Update: 2025-04-14 19:40 IST

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗರೆ ವಾರ್ಡ್ ಸಮಿತಿ ಆಶ್ರಯದಲ್ಲಿ ಕಾಲ್ನಡಿಗೆ ಜಾಥ ಮತ್ತು ಪ್ರತಿಭಟನಾ ಸಭೆ ರವಿವಾರ ಬೆಂಗರೆಯಲ್ಲಿ ನಡೆಯಿತು.

ಬೆಂಗರೆ ಕಡವಿನ ಬಳಿಯಿಂದ ಪಕ್ಷದ ಧ್ವಜವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಅಧ್ಯಕ್ಷ ಸಿದ್ದೀಕ್ ಬೆಂಗರೆ ಇವರು ವಾರ್ಡ್ ಅಧ್ಯಕ್ಷ ಮುಝೈನ್ ಐಬಿಎಂ ಅವರಿಗೆ ಹಸ್ತಾಂತರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು.

ಬೆಂಗರೆ ಮುಖ್ಯ ರಸ್ತೆಯ ಬದ್ರಿಯ ಕಟ್ಟೆಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು,ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂಧರ್ಭ ಎಸ್‌ಡಿಪಿಐ ನಗರ ಜಿಲ್ಲಾ ಅಧ್ಯಕ್ಷ ಜಲೀಲ್.ಕೆ, ಕಾರ್ಯದರ್ಶಿ ಇಕ್ಬಾಲ್, ಕಾರ್ಪೋರೇಟರ್ ಮುನೀಬ್ ಬೆಂಗರೆ ಕ್ಷೇತ್ರ ಸಮಿತಿ ಸದಸ್ಯ ಇಂಮ್ತಿಯಾಝ್, 11ನೇ ವಾರ್ಡ್ ಅಧ್ಯಕ್ಷ ಅಝರ್ ವಾರ್ಡ್ ಕಾರ್ಯದರ್ಶಿಗಳಾದ ಶಾದಾಬ್ ಬೆಂಗರೆ ,ಕರೀಮ್ ಸ್ಥಳೀಯ ಮುಖಂಡರು ನಾಗರಿಕರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News