ಸಿಪಿಐ ಕಾರ್ಯಕರ್ತೆ ಸೀತಾ ಸಾಲಿಯಾನ್ ನಿಧನ
ಮಂಗಳೂರು : ಸಿಪಿಐ ಪಕ್ಷದ ಕಾರ್ಯಕರ್ತೆ, ದ.ಕ. ಬೀಡಿ ಹಾಗೂ ಟೊಬಕ್ಕೋ ಲೇಬರ್ ಯೂನಿಯನ್ (ಎಐಟಿಯುಸಿ)ನ ಮಾಜಿ ಅಧ್ಯಕ್ಷೆ ಸೀತಾ ಸಾಲಿಯಾನ್ (೭೭) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇಬ್ಬರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.
ಬೀಡಿ ಗುತ್ತಿಗೆದಾರರಾಗಿದ್ದ ಅವರು ಅನೇಕ ಮಹಿಳೆಯರಿಗೆ ಬೀಡಿ ಸುತ್ತುವ ಕೆಲಸ ಕೊಡಿಸಿ ಅವರ ಕುಟುಂಬ ಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗಿದ್ದರು. ದ.ಕ. ಬೀಡಿ ಮತ್ತು ಟೊಬಕ್ಕೋ ಲೇಬರ್ ಯೂನಿಯನ್‌ನ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಆ ಯೂನಿಯನ್‌ನ ಅಧ್ಯಕ್ಷೆಯಾಗಿಯೂ ದುಡಿದಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ದೇರೆಬೈಲ್ ಮಂಗಳೂರು ಶಾಖೆಯ ಕಾರ್ಯದರ್ಶಿಯಾಗಿದ್ದ ಅವರು ಅಲ್ಲಿನ ಬಡಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಸ್ಪಂದಿಸುತ್ತಿದ್ದರು. ಸಿಪಿಐ ಹಾಗೂ ಎಐಟಿಯುಸಿ ಸಂಘಟನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತಿದ್ದರು.
*ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯು ಸಂತಾಪ ಸೂಚಿಸಿದೆ.