ಕೊಂಕಣಿ ಪುಸ್ತಕಗಳ ಪ್ರಕಟನೆಗೆ ಆಹ್ವಾನ
Update: 2025-04-25 19:24 IST
ಮಂಗಳೂರು, ಎ.25: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪುಸ್ತಕ ಪ್ರಕಟನೆ ಯೋಜನೆಯಡಿ ಕೊಂಕಣಿ ಸ್ವರಚಿತ ಪುಸ್ತಕಗಳ ಪ್ರಕಟನೆಗೆ ಅರ್ಜಿ ಆಹ್ವಾನಿಸಿದೆ.
ಕೊಂಕಣಿ ಕಥೆ, ಕಾದಂಬರಿ, ಲೇಖನ, ಕವನ, ಭಾಷಾಂತರ ಮತ್ತಿತರ ಪ್ರಕಾರದ ಪುಸ್ತಕಗಳ ಪ್ರಕಟನೆಗೆ ಅರ್ಜಿ ಸ್ವೀಕರಿಸಲಾಗುವುದು. ಭಾಷಾಂತರ, ಅನುವಾದಿತ, ಲಿಪ್ಯಾಂತರ ಕೃತಿಗಳಾಗಿದ್ದಲ್ಲಿ ಮೂಲ ಪ್ರತಿಯೊಂದಿಗೆ ಬೆರಳಚ್ಚು ಮಾಡಿರುವ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಜೂ.30ರೊಳಗೆ ಪ್ರಕಟನೆಗೆ ಬರಹಗಳನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಅಕಾಡಮಿಯ ಕಚೇರಿ (ದೂ.ಸಂ: 0824-2453167/ 8792934290ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.