×
Ad

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರಕ್ಕೆ ಚಾಲನೆ

Update: 2025-04-26 22:50 IST

ಕೊಣಾಜೆ: ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಇದರ ಆರ್ಥೋಪೆಡಿಕ್ ವೈದ್ಯಕೀಯ ವಿಭಾಗ ವತಿಯಿಂದ "ಅಸಾಮಿ ಇಂಡಿಯಾ, ಕೆಓಎ ಮತ್ತು ಸಿಓಎಸ್ ಮಂಗಳೂರು ಸಂಸ್ಥೆಗಳ ಆಶ್ರಯದಲ್ಲಿ ಇಳಿಜಾರೋವ್ ಉಪಕರಣದ ಬಗ್ಗೆ ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕೈಚಳಕ ಕಾರ್ಯಾಗಾರವು ಕಣಚೂರು ಆಸ್ಪತ್ರೆ ಯ ಆಡಿಟೋರಿಯಂ ನಲ್ಲಿ ಶನಿವಾರ ನಡೆಯಿತು.

ಕೆಎಂಸಿ ಮಣಿಪಾಲ ಆಸ್ಪತ್ರೆ ಯ ನಿವೃತ್ತ ಕೈ ಮತ್ತು ಮೈಕ್ರೋವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರಾನಂದ್ ಕುಮಾರ್ ಮಾತನಾಡಿ, ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರವು ಇಂದು ಬಹಳಷ್ಟು ಮುಂದುವರಿದಿದೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿ ರೋಗಿಯನ್ನೂ ನಮ್ಮದೇ ಕುಟುಂಬದ ಸದಸ್ಯನಂತೆ ನೋಡಿಕೊಳ್ಳಬೇಕು. ಕೌಶಲ್ಯಕ್ಕಷ್ಟೇ ಸೀಮಿತವಾಗದೆ, ಕರ್ತವ್ಯವೂ ಅತ್ಯಂತ ಮುಖ್ಯವಾಗಿದೆ. ಹೊಸ ತಂತ್ರಜ್ಞಾನಗಳು ಅಪಾರ ಸಾಧ್ಯತೆಗಳನ್ನು ಒದಗಿಸಿದರೂ, ಪ್ರತಿ ಯೊಂದು ವಿಧಾನಕ್ಕೂ ತನ್ನದೇ ಆದ ಸಂಕೀರ್ಣತೆ ಮತ್ತು ಅಡಚಣೆಗಳಿವೆ. ನಿರ್ವಹಣೆಯಲ್ಲಿ, ಪರಿಪೂರ್ಣ ತೆಯಲ್ಲಿ ಪರಿಣತಿ ಸಾಧಿಸಲು ನಿರಂತರ ಅಧ್ಯಯನ, ಅನುಭವ ಮತ್ತು ಶ್ರಮ ಅಗತ್ಯ. ಎಲ್ಲದರ ಕುರಿತ ಜ್ಞಾನ ಪಡೆಯಲು ಕಾರ್ಯಗಾರಗಳು ಸಹಕಾರಿ ಎಂದರು.

ಕಣಚೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಯು.ಕೆ.ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಣಚೂರು ಆರೋಗ್ಯ ವಿಜ್ಞಾನಗಳ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಮೊಹಮ್ಮದ್ ಇಸ್ಮಾಯಿಲ್ ಮಾತನಾಡಿದರು.

ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿಯ ಸದಸ್ಯ ಪ್ರೊ.ವೆಂಕಟರಾಯ್ ಪ್ರಭು, ಕಣಚೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ. ಶಹ್ನವಾಝ್ ಮಣಿಪಾಡಿ, ಮೆಡಿಕಲ್ ಸೂಪರಿಂಟೆಂಡೆಂಟ್ ಪ್ರೊ.ಹರೀಶ್ ಶೆಟ್ಟಿ, ಕೊಚ್ಚಿನ್ ನ ಅಸ್ಟರ್ ಮೆಡಿಸಿಟಿಯ ಸೀನಿಯರ್ ಕನ್ಸಲ್ಟೆಂಟ್ ಡಾ. ಚೆರಿಯನ್ ಕೊವೂರು, ಪಾಲಕ್ಕಾಡ್ ತಂಗಮ್ ಆಸ್ಪತ್ರೆಯ ಸೀನಿಯರ್ ಕನ್ಸಕ್ಟೆಂಟ್ ಡಾ. ಪಿ.ಎನ್. ವಾಸುದೇವನ್, ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್ ಮೊನಿಸ್, ವಿಭಾಗ ಮುಖ್ಯಸ್ಥರಾದ ಡಾ. ಜಲಾಲುದ್ದೀನ್ ಎಂ.ವಿ, ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಸಲಾವುದ್ದೀನ್ ಆರಿಫ್ ಕೆ ಸ್ವಾಗತಿಸಿದರು. ಡಾ. ಮಹಮ್ಮದ್ ತಮೀಸ್ ಮತ್ತು ಸುಹಾನಭಾನು ನದಾಫ್ ಕಾರ್ಯಕ್ರಮ ನಿರ್ವಹಿಸಿದರು.ಡಾ. ಅವಿನಾಶ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News