ಎಸ್‌ಎಂಎ ಮುಡಿಪು ವಲಯದಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮುಡಿಪು: ಪವಿತ್ರ ಹಜ್ಜ್ ಯಾತ್ರೆಗೈಯ್ಯುವ ಅಬೂಬಕರ್ ಮದನಿ ತೋಟಾಲ್, ಅಬ್ದುಲ್ ರಹ್ಮಾನ್ ಸಅದಿ ಸಂಬಾರತೋಟ, ಮುಹಮ್ಮದ್ ಮುಸ್ಲಿಯಾರ್ ಸಂಪಿಲ, ಅಸ್ಲಂ ಸಂಪಿಲ, ಉಮರ್ ಪರಪ್ಪು, ಅಬ್ದುಲ್ ಹಮೀದ್ ಪರಪ್ಪು, ಅಬ್ದುಲ್ಲಾ ಪರಪ್ಪು, ಅಬೂಬಕರ್ ಪರಪ್ಪು, ಮೋನಿಚ್ಚ ಸಂಪಿಲ ಮತ್ತಿತರರಿಗೆ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮುಡಿಪು ವಲಯ ವತಿಯಿಂದ ಎಜು ಪಾರ್ಕ್ ಹಾಲಿನಲ್ಲಿ ಬೀಳ್ಕೊಡಲಾಯಿತು.
ಮುಡಿಪು ವಲಯ ಅಧ್ಯಕ್ಷ ಯು.ಕೆ. ಹಸೈನಾರ್ ಹಾಜಿ ಪರಪ್ಪುಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಎಂ ದ.ಕ. ಸೌತ್ ಜಿಲ್ಲಾ ಅಧ್ಯಕ್ಷ ಮೌಲಾನಾ ಯಅಕೂಬ್ ಲತೀಫೀ ದುಆಗೈದರು. ಎಸ್‌ಜೆಎಂ ಮುಡಿಪು ರೇಂಜ್ ಅಧ್ಯಕ್ಷ ಮೊಯ್ದಿನ್ ಕಾಮಿಲ್ ಸಖಾಫಿ ಸಿಎಂ ನಗರ ಸಭೆಯನ್ನು ಉದ್ಘಾಟಿಸಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು.
ವಲಯ ಕೋಶಾಧಿಕಾರಿ ಅಬೂಬಕರ್ ಹಾಜಿ ಮದ್ಯನಡ್ಕ, ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಎಸ್.ಎಸ್. ಮೂಸಾ ಹಾಜಿ, ಕ್ಯಾಬಿನೆಟ್ ನಾಯಕರಾದ ಹಬೀಬುರಹ್ಮಾನ್ ಸಂಪಿಲ, ಎಂಎಂಕೆ ರಶಾದಿ ಮುಡಿಪು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಅಲ್‌ಅರ್ಶದಿ ಸ್ವಾಗತಿಸಿದರು. ಮುಹಮ್ಮದ್ ಹನೀಫ್ ಕಾಮಿಲ್ ಸಖಾಫಿ ವಂದಿಸಿದರು. ಅಬ್ದುರ‌್ರಹ್ಮಾನ್ ಹಾದಿ ಕಾರ್ಯಕ್ರಮ ನಿರೂಪಿಸಿದರು.