×
Ad

ಮಂಗಳೂರು ಧರ್ಮಪ್ರಾಂತ್ಯ: ಐದು ಮಂದಿಗೆ ಗುರುದೀಕ್ಷೆ

Update: 2025-04-30 22:28 IST

ಮಂಗಳೂರು: ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದಲ್ಲಿ ಧರ್ಮ ಗುರುಗಳ ತರಬೇತಿ ಪಡೆದ ಐವರಿಗೆ ಬುಧವಾರ ಗುರುದೀಕ್ಷೆ ನೀಡಲಾಯಿತು.

ಮೂಡಬಿದಿರೆ ಅಲಂಗರ್‌ನ ಅವರ್ ಲೇಡಿ ಆಫ್ ದಿ ರೋಸರಿ ಚರ್ಚ್‌ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ. ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಐವರಿಗೆ ದೀಕ್ಷೆಯನ್ನು ಪ್ರದಾನ ಮಾಡಿದರು.

ಫಾ. ಮೆಲ್ವಿನ್ ಡಿ ಸೋಜ (ನಿಡ್ಪಲ್ಲಿ), ಫಾ.ಜೀವನ್ ಶೈಲೇಶ್ ಲೋಬೊ (ಬೆಳವಾಯಿ), ಫಾ. ಮಾರ್ವಿನ್ ಪ್ರವೀಣ್ ಲೋಬೋ (ಅಲಂಗಾರ್), ಫಾ. ಅವಿತ್ ಪೈಸ್ (ಮರಿಲ್) ಮತ್ತು ಫಾ. ವಿಕಾಸ್ ಪಿರೇರಾ (ಹೊಸಪೇಟೆ) ದೀಕ್ಷೆ ಸ್ವೀಕರಿಸಿದ ನೂತನ ಧರ್ಮಗುರುಗಳು.

ವಿಕಾರ್ ಜನರಲ್ ಮ್ಯಾಕ್ಸಿಮ್ ನೊರೊನ್ಹಾ, ಫಾ. ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ. ರೊನಾಲ್ಡ್ ಸೆರಾವ್, ಎಪಿಸ್ಕೋಪಲ್ ವಿಕಾರ್ ಫಾ. ಡಾ. ಡೇನಿಯಲ್ ವೇಗಸ್, ವಿಕಾರ್(ನ್ಯಾಯಾಂಗ) ಡಾ. ಫಾದರ್ ನವೀನ್ ಪಿಂಟೊ, ವಿಕಾರ್ (ಧಾರ್ಮಿಕ) ಡಾ.ಓನಿಲ್ ಡಿ ಸೋಜ , ಮೂಡುಬಿದಿರೆ ಡೀನರಿಯ ಡೀನ್ ಫಾ. ಸಂತೋಷ್ ರೊಡ್ರಿಗಸ್, ಶಾಂತಿ ಕಿರಣ್ ನಿರ್ದೇಶಕರು ಪ್ಯಾಸ್ಟೋರಲ್ ಸೆಂಟರ್‌ನ ನಿರ್ದೇಶಕ ಫಾ. ಮೆಲ್ವಿನ್ ನೊರೊನ್ಹಾ ಉಪಸ್ಥಿತರಿದ್ದರು.

ಡಿಬಿಸಿಎಲ್‌ಸಿ ಅನಿಮೇಟೆಡ್ ಮಂಗಳ ಜ್ಯೋತಿಯ ನಿರ್ದೇಶಕ ಫಾ. ವಿಜಯ್ ಮಚಾದೊ, ಫಾ. ರೋಹಿತ್ ಡಿಕೋಸ್ಟ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಅಲಂಗರ್‌ನ ಧರ್ಮಗರು ಫಾ. ಮೆಲ್ವಿನ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

ಪವಿತ್ರ ಬಲಿಪೂಜೆಯ ನಂತರ ಗುರುದೀಕ್ಷೆ ಪಡೆದ ನೂತನ ಧರ್ಮಗುರುಗಳನ್ನು ಅಭಿನಂದಿಸಲಾಯಿತು. ಫಾ. ನವೀನ್ ಪಿಂಟೊ ಪರಿಚಯಿಸಿದರು . ದೀಕ್ಷೆ ಪಡೆದ ಧರ್ಮಗುರುಗಳ ಪರ ಫಾ. ವಿಕಾಸ್ ಪೆರೇರಾ ಕೃತಜ್ಞತೆ ಸಲ್ಲಿಸಿದರು. ಫಾ. ರಾಬಿನ್ ಸಂತುಮಾಯರ್ ಅವರು ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News