×
Ad

ಇಸ್ಲಾಮ್ ಏಕತೆಯನ್ನು ಸಾರುತ್ತದೆ: ಎಸ್.ಬಿ. ದಾರಿಮಿ

Update: 2025-04-30 23:06 IST

ಉಳ್ಳಾಲ: ಇಸ್ಲಾಮ್ ಏಕತೆಯನ್ನು ಸಾರುತ್ತದೆ. ನಾವು ಶಿಕ್ಷಣ ಜೊತೆಗೆ ಐಕ್ಯತೆ ಯಿಂದ ಜೀವನ ಸಾಗಿಸಿದರೆ ಯಾವುದೇ ಪ್ರಶ್ನೆ ಬರುವುದಿಲ್ಲ ಎಂದು ಎಸ್ ಬಿ ಮುಹಮ್ಮದ್ ದಾರಿಮಿ ಹೇಳಿದರು.

ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬಿಎಂ ಇದ್ದಿನಬ್ಬ, ಯುಟಿ ಫರೀದ್ ಈ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಾಗಿ ದುಡಿದಿದ್ದರು. ಇವರು ಇದೇ ಊರಿನವರಾಗಿದ್ದರು. ಈಗ ವಿಧಾನ ಸಭೆ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಉಳ್ಳಾಲ ಶಾಸಕ ಎಂದೇ ಹೆಸರು ಪಡೆದಿದ್ದಾರೆ. ಇದೆಲ್ಲ ನಮ್ಮ ಅಭಿಮಾನ ಆಗಿದೆ ಎಂದರು.

ಉಳ್ಳಾಲ ದರ್ಗಾ ಧಾರ್ಮಿಕ, ಲೌಕಿಕ ಶಿಕ್ಷಣ ಕೇಂದ್ರ ಹೊಂದುವ ಮೂಲಕ ಪ್ರಸಿದ್ಧಿ ಪಡೆದಿದೆ.ಇಲ್ಲಿನ ಇತಿಹಾಸ ನಾವು ಅಧ್ಯಯನ ಮಾಡಬೇಕು. ಧಾರ್ಮಿಕ ಪಂಡಿತರು ಪಂಡಿತರಲ್ಲದವರು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ ಆಗುತ್ತದೆ ಎಂದರು.

ಪಲ್ಗಾಮ್ ನಲ್ಲಿ ನಡೆದ ಘಟನೆಗೆ ಖಂಡನೆ ಇದೆ. ಪಲ್ಗಾಮ್ ಘಟನೆಗೆ ಕಾರಣರಾದವರನ್ನು ನಿರ್ನಾಮ ಮಾಡಬೇಕು. ಇದಕ್ಕೆ ಬೆಂಬಲ ನಾವು ನೀಡುತ್ತೇವೆ. ಈ ಘಟನೆ ಕಾರಣದಿಂದ ಮುಸ್ಲಿಮರ ಮೇಲೆ ಕಪ್ಪು ಚುಕ್ಕೆ ಬೇಡ. ನಮ್ಮಲ್ಲಿ ಜಾತಿ ಧರ್ಮ ಭಿನ್ನಮತಕ್ಕೆ ಅವಕಾಶ ಇಲ್ಲ. ಕೊಲೆ, ಹಲ್ಲೆಗೆ ಇಸ್ಲಾಮ್ ನಲ್ಲಿ ಆಸ್ಪದ ಇಲ್ಲ. ಪ್ರಾರ್ಥನೆ, ಆರಾಧನೆ ಬಗ್ಗೆ ಮಾತ್ರ ಇಸ್ಲಾಮ್ ವಿವರಿಸುತ್ತದೆ. ಕಳ್ಳತನಕ್ಕೂ ಕೂಡ ಇಸ್ಲಾಮ್ ನಲ್ಲಿ ಅವಕಾಶ ಇಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಧಾರ್ಮಿಕ ಪ್ರವಚನ ನೀಡಿದರು. ಇರ್ಷಾದ್ ದಾರಿಮಿ ಮಿತ್ತ ಬೈಲು ದುಆ ನೆರವೇರಿಸಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋಡಿ ಮಸೀದಿ ಅಧ್ಯಕ್ಷ ಮುಹಮ್ಮದ್, ಖತೀಬ್ ಆದಂ ಫೈಝಿ, ಮದನಿ ನಗರ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಖತೀಬ್ ಪಿ.ಎಸ್.ಮುಹಮ್ಮದ್ ಸಖಾಫಿ , ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್, ಹಮೀದ್ ಕೋಡಿ , ಅಶ್ರಫ್ ಹಾಜಿ,ನಗರಸಭೆ ಸದಸ್ಯ ಅಝೀಝ್, ಅಶ್ರಫ್ ಕೋಡಿ, ಅಶ್ರಫ್ ಸೋಲಾರ್, ಯೂಸುಫ್ ಬಾವ ಮತ್ತಿತರರು ಉಪಸ್ಥಿತರಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News