×
Ad

ಮಾಣಿ‌ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಉತ್ತಮ‌ ಸಾಧನೆ

Update: 2025-05-03 10:40 IST

ಬಂಟ್ವಾಳ : ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಈ‌ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ‌ ಸಾಧನೆ ಮಾಡಿದ್ದು, ಶಾಲಾ ವಿದ್ಯಾರ್ಥಿನಿ ಸ್ವಸ್ತಿ ಎಸ್.ಭಟ್ 618 ಅಂಕಗಳಿಸಿ ರಾಜ್ಯಕ್ಕೆ 8ನೇ ಸ್ಥಾನಿಯಾಗಿದ್ದು, ಶಾಲೆಗೆ ಮೊದಲ ಸ್ಥಾನಿಯಾಗಿದ್ದಾಳೆ.

ಉಳಿದಂತೆ ವಿದ್ಯಾರ್ಥಿಗಳಾದ ವೈಷ್ಣವಿ 615, ನಿವ್ಯಾ ರೈ 608, ಮಹಮ್ಮದ್ ತಝೀಮ್ ಇಕ್ಬಾಲ್ 608, ಲೋಯ್ಲಿನ್ ಪಾಯ್ಸ್ 607, ಸೌರಭ್ ಪ್ರಭು 606 ಹಾಗೂ ಆರೂನ್ ಪಾಯ್ಸ್ 600 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯಿಂದ ಪರೀಕ್ಷೆಗೆ ಹಾಜರಾದವರ ಪೈಕಿ 25 ವಿದ್ಯಾರ್ಥಿಗಳು 90ಶೇ.ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದು, 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News