ಕಣಚೂರು: ಫಿಸಿಯೋಥೆರಪಿ, ನರ್ಸಿಂಗ್ ಸೈನ್ಸ್, ಅಲೈಡ್ ಹೆಲ್ತ್ ಸೈನ್ಸ್ ಪದವಿ ದಿನಾಚರಣೆ
ಕೊಣಾಜೆ: ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಇದರ ಫಿಸಿಯೋಥೆರಪಿ, ನರ್ಸಿಂಗ್ ಸೈನ್ಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ದ್ವಿತೀಯ ವರ್ಷದ ಪದವಿ ಪ್ರದಾನ ಸಮಾರಂಭ ನಾಟೆಕಲ್ ಕಣಚೂರು ಕಾನ್ಫರೆನ್ಸ್ ಡ್ರೋಮ್ ನಲ್ಲಿ ಶನಿವಾರ ನಡೆಯಿತು.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ( ಐಎಎಸ್ ) ಪದವಿ ಪ್ರಧಾನ ಮಾಡಿ ಮಾತನಾಡಿ, ಅಲೈಡ್ ಹೆಲ್ತ್ ಕೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ತಾಂತ್ರಿಕ ಜ್ಞಾನ ಕ್ಕಿಂತಲೂ ಹೆಚ್ಚು, ಮನಸ್ಸಿನ ಹಗುರತೆ ಮತ್ತು ಮಾನವೀಯ ಮೌಲ್ಯಗಳು ಮುಖ್ಯವಾಗಿದೆ. ನಿಷ್ಕಲ್ಮಶ ಪ್ರೀತಿ, ವೃತ್ತಿಪರತೆ, ಮತ್ತು ಸತತ ಶ್ರದ್ಧೆಯೊಂದಿಗೆ ಕೆಲಸ ಮಾಡುವ ಗುಣಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ದೇಶದಲ್ಲಿ ಆರೋಗ್ಯ ಸೇವಾ ತಜ್ಞರ ಕೊರತೆಯು ಗಂಭೀರವಾಗಿದ್ದು, ಇತ್ತೀಚೆಗೆ ಮಾತ್ರ ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ದೊರೆತಿದೆ. ಆರೋಗ್ಯ ವೃತ್ತಿಪರರು ದೇಶದ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುತ್ತಾರೆ. ಈ ವಲಯದ ಅಭಿವೃದ್ಧಿ ರಾಷ್ಟ್ರೀಯ ಅಭಿವೃದ್ಧಿಗೆ ಅನಿವಾರ್ಯವಾಗಿದೆ.ಈ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣದಲ್ಲಿ ಕಣಚೂರ್ ಸಂಸ್ಥೆಯ ನಿಷ್ಠೆ ಮತ್ತು ಸೇವೆ ಶ್ಲಾಘನೀಯವಾಗಿದೆ ಎಂದರು.
ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಅಧ್ಯಕ್ಷತೆ ವಹಿಸಿ ಮಾತನಾಡಿ,
ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಪ್ರತಿಯೊಬ್ಬರ ಕೂಡಾ ಜೀವನ ಯಶಸ್ಸಿನತ್ತ ಸಾಗಬೇಕಾದರೆ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ ಮಾಡದೆ ಸ್ಪೂರ್ತಿ ಹಾಗೂ ಪರಿಶ್ರಮದ ಮೂಲಕ ಕೆಲಸ ಕಾರ್ಯ ನಿರ್ವಹಿಸಬೇಕು. ಹಾಗೆಯೇ ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುವ ಮನೋಭಾವ ನಮ್ಮದಾಗ ಬೇಕು ಮತ್ತು ನಮ್ಮ ಅನೇಕ ಜವಬ್ಧಾರಿಗಳೊಂದಿಗೆ ಪಾಲಕರ ಕನಸನ್ನು ನನಸಾಗಿಸಬೇಕು ಎಂದರು.
2025ನೇ ಸಾಲಿನ ಡಾ. ಕಣಚೂರ್ ಮೋನು ಚಿನ್ನದ ಪದಕವನ್ನು ಬ್ಯಾಚುಲರ್ ಆಫ್ ಫಿಸಿಯೊಥೆರಪಿ (BPT) ವಿಭಾಗದಲ್ಲಿ ಡಾ. ಅಸ್ಮಿತಾ ಶ್ರೇಷ್ಟಾ, ಹಾಗೂ ಮಾಸ್ಟರ್‌ಸ್ ಆಫ್ ಫಿಸಿಯೊಥೆರಪಿ (MPT) ವಿಭಾಗದಲ್ಲಿ ಡಾ. ಅಥುಲ್ಯಾ ಪಿಕೆ ಅವರು ಪಡೆದುಕೊಂಡರು.
203 ಪ್ಯಾರಾಮೆಡಿಕಲ್ ಕಾಲೇಜುಗಳ ಪೈಕಿ ಶಿಜಾನಾ ಬಿ.ಎಸ್.ಸಿ. ರಿನಲ್ ಡಯಾಲಿಸಿಸ್ ತಂತ್ರಜ್ಞಾನ ವಿಭಾಗದಲ್ಲಿ ಓವರಾಲ್ ಟಾಪರ್ ಆಗಿ ಮೂಡಿಬಂದು ಘಟಿಕೋತ್ಸವದಲ್ಲಿ ಪದವಿಯನ್ನು ಪಡೆದು ಕೊಂಡರು.
ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ 14 ಮಂದಿ ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಶ್ರೇಷ್ಟ ಸ್ಥಾನ ಪಡೆದರು. ಸ್ನಾತಕೋತ್ತರ ಪೂರ್ವದ ಅಧ್ಯಯನ (BPT) ವಿಭಾಗದಲ್ಲಿ ಡಾ. ಅಸ್ಮಿತಾ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪಡೆದುಕೊಂಡಿದ್ಸಾರೆ.. ಡಾ. ಆರ್ಜಿ ಶಾ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದು ಕೊಂಡಿದ್ದಾರೆ. ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಗಳಿಸಿದ ಡಾ.ಕೃತಿಕಾ, ಡಾ.ಅಫೀಪಾ, ಡಾ.ಅತುಲ್ಯಾ ಪಿ.ಕೆ, ಡಾ.ಜಿಷ್ನಾ , ಡಾ.ಅಲೀನಾ, ಡಾ.ಅಮೀನ ಎಸ್, ಡಾ.ಫೈಸಲ್ ಮಜೀದ್, ಡಾ.ಶಿಫಾನಿ, ಡಾ.ಮರಿಯಾ ಶಾಹ್ಜಹಾನ್, ಡಾ.ಆಯಿಷಾ ಇಸ್ಮತ್, ಡಾ.ಸುಹೈಲ್, ಡಾ.ಬಿಸ್ಕರ್ ಫಿಯಾಲ್ ಅವರನ್ನು ಪದವಿಯೊಂದಿಗೆ ಗೌರವಿಸಲಾಯಿತು.
ಕಾರ್ಯಕ್ರಮ ದಲ್ಲಿ ಡಾ.ಮಹಮ್ಮ ದ್ ಇಸ್ಮಾಯಿಲ್ ಹೆಜಮಾಡಿ, ,ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ನಿರ್ದೇಶಕರಾದ ಅಬ್ದುಲ್ ರಹ್ಮಾನ್, ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡಾ.ರೋಹನ್ ಮೋನಿಸ್, ಟ್ರಸ್ಟಿ ಝೊಹರ ಮೋನು, ಡಾ ಶಹನವಾಝ್, ಡಾ ವೆಂಕಟರಾಯ ಪ್ರಭು, ಕಣಚೂರು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮ್ಮದ್ ಸುಹೈಲ್, ಕಣ್ಣೂರು ವಿವಿ ವಿಶ್ರಾಂತ ಕುಲಪತಿ ಡಾ.ಅಬ್ದುಲ್ ರಹ್ಮಾನ್ , ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಅಂಜನ್ ಕುಮಾರ್,ಡಾ.ಮೋನಿ ಸಲ್ದಾನ, ಡಾ.ಶಮೀಮ ಮತ್ತಿತರರು ಉಪಸ್ಥಿತರಿದ್ದರು
ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಅಬ್ದುಲ್ ರಹ್ಮಾನ್ ಸ್ವಾಗತಿಸಿದರು.