×
Ad

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಯೂಟ್ಯೂಬ್ ಚಾನೆಲ್‌ನ ಸುದ್ದಿಗೆ ಕಾಮೆಂಟ್ ಹಾಕಿದ್ದ ಆರೋಪಿಯ ಗುರುತು ಪತ್ತೆ

Update: 2025-05-03 21:52 IST

ಮಂಗಳೂರು: ನಗರ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನೆಲ್‌ನ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದೆ.

ಆರೋಪಿಯನ್ನು ಸುರತ್ಕಲ್‌ನ ಸಚಿನ್ (25) ಎಂದು ಗುರುತಿಸಲಾಗಿದೆ. ಲೈವ್ ಯೂ ಟ್ಯೂಬ್ ನ್ಯೂಸ್ 18 ಚಾನಲ್‌ನಲ್ಲಿ Mr silent Lvr ಎಂಬ ಹೆಸರಿನ ವ್ಯಕ್ತಿಯು ಎರಡು ದಿನ ಆದ ಮೇಲೆ ಮಂಗಳೂರಿನಲ್ಲಿ ಹೆಣ ಬೀಳುವುದು ಸತ್ಯ. ಅದರಲ್ಲಿ ಸರತ್ಕಲ್‌ನ ಕೋಡಿಕೆರೆ ಜನ ಬಿಡೋ ಮಾತೆ ಇಲ್ಲ ಎಂದು ಕಾಮೆಂಟ್ ಹಾಕಿದ್ದ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮುಂದಿನ ತನಿಖೆಗಾಗಿ ಮಂಗಳೂರು ನಗರ ಸೆನ್ ಅಪರಾಧ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಯೂ ಟ್ಯೂಬ್ ನ್ಯೂಸ್ 18 ಚಾನಲ್‌ನಲ್ಲಿ ಕಾಮೆಂಟ್ ಹಾಕಿದ ಆರೋಪಿಯನ್ನು ಸಚಿನ್ ಎಂದು ಗುರುತಿಸಿ ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News