×
Ad

ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ ಕ್ರಿಕೆಟ್: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಸತತ ಮೂರನೇ ಬಾರಿಗೆ ಚಾಂಪಿಯನ್

Update: 2025-05-04 18:07 IST

ಮಂಗಳೂರು, ಮೇ 4: ನಗರದ ಕೆನರಾ ಕಾಲೇಜಿನ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಮುಲ್ಕಿ ದಯಾ ನಂದ್ ಕಾಮತ್ ಮೆಮೋರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿ.ವಿ. (ಮಂಗಳೂರು ವಲಯ) ಅಂತರ್ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವು ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಎಸ್‌ಡಿಎಂಸಿಬಿಎಂ ವಿರುದ್ಧ ವಾಗಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಎಸ್‌ಡಿಎಂ ತಂಡವು 78 ರನ್ನುಗಳಿಗೆ ಆಲೌಟ್ ಆಯಿತು. ಸೇಕ್ರೆಡ್ ಹಾರ್ಟಿನ ಶಿವಾಟಶು 3 ವಿಕೆಟ್ ಪಡೆದರೆ ಸ್ವಸ್ತಿಕ್, ನಯನ್, ವಿಕಾಸ್, ತುಷಾರ್ ತಲಾ ಒಂದು ವಿಕೆಟ್ ಪಡೆದರು. 79 ರನ್ನುಗಳ ಗುರಿಪಡೆದ ಸೇಕ್ರೆಡ್ ಹಾರ್ಟ್ ತಂಡವು 10.1 ಓವರುಗಳಲ್ಲಿ 5 ವಿಕೆಟಿಗೆ ಗುರಿಮುಟ್ಟಿತು. ತಂಡದ ಪರವಾಗಿ ನಯನ್ 39 (29) ಹಾಗೂ ನೂತನ್ 28 (18) ರನ್ನುಗಳಿಸಿದರು.

ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೇಕ್ರೆಡ್ ಹಾರ್ಟ್‌ನ ನಯನ್ ಸರಣಿಯ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎಸ್‌ಡಿಎಂನ ರೆಹನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರೆ, ಫೈನಲ್‌ನಲ್ಲಿ 3 ವಿಕೆಟ್ ಕಿತ್ತ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿವಾಣಶು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News