ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್: ನೂತನ ಪದಾಧಿಕಾರಿಗಳ ಆಯ್ಕೆ
ವಿ.ಎ. ಮುಹಮ್ಮದ್ ಸಖಾಫಿ
ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾ ಮಂಗಳೂರು ರೋನ್ ಮಹಾಸಭೆಯು ರವಿವಾರ ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ನಲ್ಲಿ ವಿ.ಎ.ಮುಹಮ್ಮದ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ಬಶೀರ್ ಮದನಿ ಕುಳೂರು ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಸಂಘಟನಾ ಮಹಾಸಭೆಗಳ ನಿಲುವಳಿ ಮಂಡಿಸಿದರು. ವೀಕ್ಷಕರಾಗಿ ಮುಹಮ್ಮದ್ ಸಾಮಣಿಗೆ ಮದನಿ ಭಾಗವಹಿಸಿದ್ದರು. 2025-26ನೇ ಸಾಲಿನ ಸಮಿತಿಯ ಅಧ್ಯಕ್ಷರಾಗಿ ವಿ.ಎ. ಮುಹಮ್ಮದ್ ಸಖಾಫಿ ವಳವೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಬೋಂದೆಲ್, ಕೋಶಾಧಿಕಾರಿಯಾಗಿ ಬಿ.ಎ. ಸಲೀಂ ಅಡ್ಯಾರ್ ಪದವು, ಉಪಾಧ್ಯಕ್ಷರಾಗಿ ಬಶೀರ್ ಅಹ್ಮದ್ ಪಂಜಿಮೊಗರು, ದಅ್‌ವಾ ಕಾರ್ಯದರ್ಶಿಯಾಗಿ ಬಶೀರ್ ಮದನಿ ಕುಳೂರು, ಸಂಘಟನಾ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಅಡ್ಯಾರ್‌ಪದವು, ಇಸಾಬ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕಾವೂರು, ಸಹಾಯ್ ಕಾರ್ಯದರ್ಶಿ ಯಾಗಿ ಬಿ.ಎ. ಅಬ್ದುಲ್ ಹಮೀದ್ ಬೆಂಗರೆ, ಮೀಡಿಯಾ ಕಾರ್ಯದರ್ಶಿಯಾಗಿ ಅಬ್ದುಲ್ ಫಲುಲ್ ಪೆರಿಮಾರ್, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಸಿದ್ದೀಕ್ ಹಾಜಿ ಫರಂಗಿಪೇಟೆ, ಆಂತರಿಕ ವ್ಯವಹಾರ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕಣ್ಣೂರು, ಸದಸ್ಯರಾಗಿ ಅಶ್ರಫ್ ಕಿನಾರ ಮಂಗಳೂರು, ಹಸನ್ ಮುಸ್ಲಿಯಾರ್ ಖಾದಿಮುಲ್ ಮರ್ಕಝ್, ಅಬ್ಬಾಸ್ ಹಾಜಿ ಬಿಜೈ, ಇಬ್ರಾಹೀಂ ಬೆಂಗರೆ, ಅಬ್ದುಲ್ ರಹಿಮಾನ್ ಹಾಜಿ ಕೊಪ್ಪಳ, ಸುಲೈಮಾನ್ ಮುಸ್ಲಿಯಾರ್ ಅರಫ, ಶೇಕುಂಞಿ ಹಾಜಿ, ಅಬ್ದುಲ್ ಹಕೀಂ ಮಾಯಿಲಾ, ಅಬ್ದುಲ್ ಜಬ್ಬಾರ್ ಮದನಿ ಕಣ್ಣೂರು, ಝುಬೈರ್ ಕಣ್ಣೂರು, ಹನೀಫ್ ಬಿಕರ್ನಕಟ್ಟೆ, ಹಾಫಿಳ್ ಯಾಕೂಬ್ ಸಅದಿ ನಾವೂರು, ಅಶ್ರಫ್ ಫಳಿಲಿ ಅವರನ್ನು ಆಯ್ಕೆ ಮಾಡಲಾಯಿತು.