ಕುದ್ರೋಳಿ: ಮದುವೆ ಕಾರ್ಯಕ್ರಮದಲ್ಲಿ ಬ್ಯಾಗ್ ಕಳವು
Update: 2025-05-05 22:14 IST
ಮಂಗಳೂರು, ಮೇ 5: ನಗರದ ಕುದ್ರೋಳಿಯ ಸಭಾಂಗಣವೊಂದರಲ್ಲಿ ರವಿವಾರ ನಡೆದ ಮದುವೆ ಕಾರ್ಯಕ್ರಮದ್ಲ 4.97 ಲಕ್ಷ ರೂ. ಮೌಲ್ಯದ ಸೊತ್ತುಗಳಿರುವ ಎರಡು ಬ್ಯಾಗ್‌ಗಳನ್ನು ಕಳವಾಗಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಬ್ಯಾಗ್‌ನಲ್ಲಿ 3 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ 2 ಚಿನ್ನದ ನಾಣ್ಯ, 5 ಗ್ರಾಂ ತೂಕದ 4 ಚಿನ್ನದ ನಾಣ್ಯ, 2 ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ಆಧಾರ್ ಕಾರ್ಡ್‌ಗಳಿದ್ದವು ಎನ್ನಲಾಗಿದೆ.
ಇನ್ನೊಂದು ಬ್ಯಾಗ್‌ನಲ್ಲಿ 1.60 ಲಕ್ಷ ರೂ. ಮೌಲ್ಯದ 12 ಗ್ರಾಂ ತೂಕದ ಚಿನ್ನದ ನೆಕ್ಲೆಸ್, ಮೊಬೈಲ್, ಚೆಕ್ ಬುಕ್, ಆಧಾರ್ ಕಾರ್ಡ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, 15 ಸಾವಿರ ರೂ. ನಗದು ಸೇರಿ 4.97 ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ಹೇಳಲಾಗಿದೆ. ಮಧ್ಯಾಹ್ನ 2:20ರಿಂದ 2:40ರ ಮಧ್ಯದ ಅವಧಿಯಲ್ಲಿ ಬ್ಯಾಗ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.