×
Ad

ವಿದೇಶದಲ್ಲಿ ಉದ್ಯೊಗದ ಆಮಿಷ ಆರೋಪ: ಮಂಗಳೂರಿನ ಖಾಸಗಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು

Update: 2025-05-05 22:45 IST

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಲವು ಮಂದಿಯಿಂದ ಹಣ ಪಡೆದು ಬಳಿಕ ವಂಚಿಸಿದ ಬಗ್ಗೆ ನಗರದ ಖಾಸಗಿ ಸಂಸ್ಥೆಯೊಂದರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವರ್ಷಿತ್ ರಾಜ್ ಎಂಬವರು ನೀಡಿದ ದೂರಿನಲ್ಲಿ ಬೆಂದೂರ್‌ವೆಲ್ ಕಂಕನಾಡಿಯ ಹೈರೆಗ್ಲೋ ಎಲಿಗೆಂಟ್ ಓವರ್‌ಸೀಟ್ ಇಂಟರ್‌ನ್ಯಾಷನಲ್ (ಪ್ರೈ.ಲಿ.) ಎಂಬ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 1.65 ಲಕ್ಷ ರೂ. ಪಡೆದು ಬಳಿಕ ಉದ್ಯೋಗ ಕೊಡದೆ ವಂಚಿಸಿದೆ. ತನ್ನಂತೆ ಇತರರಿಂದ 2024ರ ನವೆಂಬರ್ 4ರಿಂದ 2025 ಮೇ 1ರ ಅವಧಿಯೊಳಗೆ ಸಂಸ್ಥೆಯ ಮಾಸುಲ್ಲಾ ಅಥಾವುಲ್ಲಾ ಖಾನ್ ಎಂಬಾತ ಹಲವು ಮಂದಿಯಿಂದ ಹಣ ಪಡೆದು 1.82 ಕೋ.ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News