×
Ad

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ

Update: 2025-05-05 23:23 IST

ಬಂಟ್ವಾಳ : ಪಾಣೆಮಂಗಳೂರು ರೈಲ್ವೆ ಮೇಲ್ಸೇತುವೆಯ ಅಡಿಭಾಗದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ.

ಸುಮಾರು 40-45 ವರ್ಷ ವಯಸ್ಸಿನ ಗಂಡಸಿನ ಮೃತದೇಹ ಇದಾಗಿದೆ. ಈ ಬಗ್ಗೆ ತಲಪಾಡಿ-ಪೊನ್ನೋಡಿ ನಿವಾಸಿ ಪ್ರಥಮ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರಿನಲ್ಲಿ ಏರ್ ಕಂಡೀಷನ್ ಟೆಕ್ನಿಶಿಯನ್ ಆಗಿರುವ ಇವರು ಬುಧವಾರ ಕೆಲಸಕ್ಕೆ ರಜೆ ಇದ್ದುದರಿಂದ ಸಂಜೆ ವೇಳೆ ಬಿ ಮೂಡ ಗ್ರಾಮದ ಕೈಕುಂಜೆ ರೈಲ್ವೆ ಹಳಿಯ ಬ್ರಿಡ್ಜ್ ಮೇಲೆ ನಂದಾವರಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯ ನೇತ್ರಾವತಿ ನದಿಯ ತಟದ ನೀರಿನಲ್ಲಿ ಮೃತದೇಹ ತೇಲಿಕೊಂಡಿರುವುದನ್ನು ನೋಡಿದ್ದಾರೆ.

ಮೃತ ವ್ಯಕ್ತಿಯ ಗುರುತು ಪರಿಚಯ ಅಲಭ್ಯವಾಗಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಈಜುಗಾರರ ಸಹಾಯದಿಂದ ಮೃತ ದೇಹವನ್ನು ನದಿ ದಡಕ್ಕೆ ತರಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಶರೀರವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News