ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಸ್ಥಳ ಮಹಜರು
Update: 2025-05-06 22:15 IST
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಈಗಾಗಲೆ ಹತ್ಯೆ ಪ್ರಕರಣದ ಆರೋಪಿಗಳು ಅಡಗಿಕೊಂಡಿದ್ದ, ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದ, ಕೃತ್ಯ ನಡೆಸುವುದಕ್ಕೂ ಮೊದಲು ತಂಗಿದ್ದ ಸ್ಥಳಗಳನ್ನು ಪೊಲೀಸರು ಮಹಜರು ಮಾಡಿದ್ದರು. ಮಂಗಳವಾರ ಹತ್ಯೆ ನಡೆದ ಸ್ಥಳಕ್ಕೆ 7 ಮಂದಿ ಆರೋಪಿಗಳನ್ನು ಕರೆದುಕೊಂಡು ಮಹಜರು ಮಾಡಲಾ ಯಿತು. ಇನ್ನೋವಾ ಮತ್ತು ಪಿಕಪ್ ವಾಹನ ಅಪಘಾತ ನಡೆದ ಸ್ಥಳ, ಬಳಿಕ ಹತ್ಯೆ ನಡೆದ ಸ್ಥಳ, ನಂತರ ಪರಾರಿಯಾಗಿದ್ದ ಸ್ಥಳಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಆರೋಪಿಗಳ ಹೇಳಿಕೆಯನ್ನು ಆಡಿಯೋ - ವೀಡಿಯೋ ಸಹಿತ ದಾಖಲಿಸಲಾಯಿತು. ಈ ಸಂದರ್ಭ ಸ್ಥಳದಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿತ್ತು.