×
Ad

ಭಯೋತ್ಪಾದನೆಯ ವಿರುದ್ಧದ ಹೋರಾಟಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು: ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್

Update: 2025-05-07 22:06 IST

ಕೋಝಿಕೋಡ್: ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವು ದೇಶದ ಶಕ್ತಿಯನ್ನೂ ಬಲವನ್ನೂ ಪ್ರತಿಬಿಂಬಿಸುವುದಷ್ಟೇ ಅಲ್ಲ, ಮಾನವೀಯತೆಯೆಂಬ ನಮ್ಮ ಶಾಶ್ವತವಾದ ಕಟ್ಟುಪಾಡುಗಳನ್ನೂ ಒತ್ತಿ ಹೇಳುವುದಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಸೇನೆಯ ‘ಆಪರೇಷನ್ ಸಿಂದೂರ್’ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಶ್ಮೀರವನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದಲ್ಲಿ ಅಶಾಂತಿ ಸೃಷ್ಟಿಸುವ ಭಯೋತ್ಪಾದನಾ ಚಟುವಟಿಕೆ ಗಳಿಗೆ ಮುಕ್ತಾಯ ತರಲು ಭಾರತದ ಕ್ರಮಗಳು ಪ್ರೇರಕವಾಗಬಹುದು. ರಾಜತಾಂತ್ರಿಕ ನಿಲುವುಗಳ ಮೂಲಕವೂ ಭಯೋತ್ಪಾತದ ವಿರುದ್ಧದ ಹೋರಾಟವನ್ನು ಇನ್ನಷ್ಟು ವ್ಯಾಪಕವಾಗಿಯೂ ಪರಿಣಾಮಕಾರಿ ಯಾಗಿಯೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಕೈಗೊಳ್ಳಲು ಮತ್ತು ಗೌರವಯುತ ಸಾಧನೆಗಳನ್ನು ತಲುಪಲು ಭಾರತಕ್ಕೆ ಸಾಧ್ಯವಾಗಲಿ ಎಂದು ಅವರು ಆಶಿಸಿದರು. ಈ ಪ್ರಯತ್ನಗಳನ್ನು ಬೆಂಬಲಿಸುವುದು ಮಾನವೀಯತೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಕರ್ತವ್ಯವೆಂದು ಅವರು ಹೇಳಿದರು.

ಭಾರತದ ಭದ್ರತೆ, ಏಕತೆ ಮತ್ತು ಅಖಂಡತೆಯಿಗಾಗಿ ಎಲ್ಲ ನಾಗರಿಕರೂ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಗ್ರ್ಯಾಂಡ್ ಮುಫ್ತಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News