×
Ad

ಮಠದಬೈಲುವಿನಲ್ಲಿ ಸರಣಿ ಕಳ್ಳತನ

Update: 2025-05-07 22:44 IST

ಮಂಗಳೂರು: ಗುರುಪುರ ಮೂಳೂರು ಮಠದಬೈಲು ಎಂಬಲ್ಲಿ ಎರಡು ಮನೆ ಹಾಗೂ ದೈವಸ್ಥಾನಗಳಿಗೆ ಕಳ್ಳರು ನುಗ್ಗಿ ನಗ ನಗದು ಕಳವುಗೈದು ಪರಾರಿಯಾದ ಘಟನೆ ವರದಿಯಾಗಿದೆ.

ಎ.6ರಂದು ರಾತ್ರಿ ಗಣೇಶ್ ಕೊಟ್ಟಾರಿ ಎಂಬವರ ಮನೆಯ ಅಂಗಳದಲ್ಲಿರುವ ದೈವಸ್ಥಾನದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಹೆಣ್ಣು ದೈವದ ಕುತ್ತಿಗೆಯಲ್ಲಿದ್ದ 3 ಚಿನ್ನದ ಕರಿಮಣಿ ಸರಗಳು ಕಳುವಾಗಿದೆ. ಕಳುವಾದ ಚಿನ್ನದ ಕರಿಮಣಿ ಸರಗಳು ಇವುಗಳ ಅಂದಾಜು ಮೌಲ್ಯ ಸುಮಾರು 75000 ರೂ. ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 2000 ರೂ. ಹಣವನ್ನು ಕಳವು ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಗಣೇಶ್ ಕೊಟ್ಟಾರಿ ನೆರೆ ಮನೆಯ ಶೋಧನ್ ರಾವ್ ಮನೆಯ ಅಂಗಳದ ದೈವಸ್ಥಾನದ ಬಾಗಿಲನ್ನು ಮುರಿ ದಿದ್ದಾರೆ. ಸ್ವಲ್ಪ ದೂರದಲ್ಲಿರುವ ರಾಧ ಎಂಬವರ ಮನೆಯ ಬೀಗ ಮುರಿದು ಅಲ್ಮೇರಗಳನ್ನು ಮುರಿದು ಹಾಕಿಲಾಗಿದೆ. ಗುಲಾಬಿ ಎಂಬವರ ಮನೆಯ ಬಾಗಿಲುಗಳನ್ನು ಮತ್ತು ಅಲ್ಮೇರಾಗಳನ್ನು ಮುರಿದು ಅವರ ಮನೆಯಲ್ಲಿದ್ದ ದೇವರ ಬೆಳ್ಳಿಯ ಸುಮಾರು 30000 ರೂ. ಮೌಲ್ಯದ ಬೆಳ್ಳಿ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News