ಸುರತ್ಕಲ್| ಯುವಕನ ಕೊಲೆಗೆ ವಿಫಲಯತ್ನ ಆರೋಪ: ಪ್ರಕರಣ ದಾಖಲು
Update: 2025-05-07 22:47 IST
ಸುರತ್ಕಲ್: ಮನೆಗೆ ನುಗ್ಗಿ ಕೊಲೆಗೆ ವಿಫಲಯತ್ನ ನಡೆಸಿದ್ದಾರೆ ಎಂದು ಚೊಕ್ಕಬೆಟ್ಟು ನಿವಾಸಿ ರಫೀಕ್ ಎಂಬವರು ಆರೋಪಿಸಿದ್ದಾರೆ.
ಚೊಕ್ಕಬೆಟ್ಟು 6ನೇ ಬ್ಲಾಕ್ ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ವರದಿಯಾಗಿದ್ದು, ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಚೊಕ್ಕಬೆಟ್ಟು ಗ್ರೌಂಡ್ ಬಳಿಯ ನಿವಾಸಿ ಸದ್ಯ ಚೊಕ್ಕಬೆಟ್ಟು 6ನೇ ಬ್ಲಾಕ್ ನಲ್ಲಿ ವಾಸವಿರುವ ರಫೀಕ್ ಎಂಬವರ ಕೊಲೆಗೆ ದುಷ್ಕರ್ಮಿಗಳು ವಿಫಲ ಯತ್ನ ನಡೆಸಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಸಿ ಶ್ರೀಕಾಂತ್, ಪಣಂಬೂರು ಪೊಲೀಸ್ ಠಾಣೆಯ ನಿರೀಕ್ಷಕ ಅಬ್ಬಾಸ್, ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಘು ನಾಯಕ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.