ಸುಳ್ಯದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಜಯೋತ್ಸವ
Update: 2025-05-07 23:08 IST
ಮಂಗಳೂರು: ಆಪರೇಷನ್ ಸಿಂಧೂರ್ ಮೂಲಕ ನಡೆಸಲಾದ ಕಾರ್ಯಾಚರಣೆಯಲ್ಲಿ ಭಾರತದ ಹೆಮ್ಮೆಯ ಸೈನಿಕರು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಯುವಕ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಮಾತನಾಡಿ ಪಾಕಿಸ್ತಾನದ ಉಗ್ರರನ್ನು ಸದೆಬಡಿಯುವಲ್ಲಿ ಭಾರತದಲ್ಲಿ ಸೈನಿಕರು ಯಶಸ್ವಿಯಾಗಿದೆ ಎಂದು ಸೈನಿಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಯುವಕ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ರಾಧಾಕೃಷ್ಣ ಬಳ್ಳೂರ್,ವೆಂಕಪ್ಪ ಗೌಡ, ಲಕ್ಷ್ಮೀಶ್ ಗಬ್ಬಳಡ್ಕ, ಗೋಕುಲ್ ದಾಸ್ ಮೊದಲಾದವರು ಮಾತನಾಡಿದರು.
ಭವಾನಿ ಶಂಕರ ಕಾರ್ಯಕ್ರಮ ನಿರೂಪಿಸಿದರು ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಕೂಗಿ ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕೊನೆಗೊಂಡಿತು ಸಲೀಂ ಪೆರುಂಗೋಡಿ ಸಿಹಿತಿಂಡಿ ಹಂಚಿದರು.