ಸಾಮಾಜಿಕ ಕಾರ್ಯಕರ್ತೆ ನಳಿನಿ ಕೋಡಿಕಲ್ ನಿಧನ
Update: 2025-05-08 20:19 IST
ಮಂಗಳೂರು, ಮೇ 8: ಭಾರತ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯೆ, ದ.ಕ. ಬೀಡಿ, ಟೊಬಕೋ ಲೇಬರ್ ಯೂನಿಯನ್ (ಎಐಟಿಯುಸಿ)ನ ಮಾಜಿ ಪದಾಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಳಿನಿ ಕೋಡಿಕಲ್ (79) ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಸಾಮಾಜಿಕ ಸೇವೆಯಿಂದ ಕೋಡಿಕಲ್ ಪರಿಸರದಲ್ಲಿ ಜನಾನುರಾಗಿಯಾಗಿದ್ದರು.
*ಸಿಪಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ. ಶೇಖರ್, ತಾಲೂಕು ಸಮಿತಿಯ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೇರಿಂಜೆ, ಸಿಪಿಐ ಕೋಡಿಕಲ್ ಶಾಖೆಯ ಕಾರ್ಯದರ್ಶಿ ಜಗತ್ಪಾಲ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.