ಮಾದಕ ದ್ರವ್ಯ ಸೇವನೆ ಪ್ರಕರಣ: ಐವರ ಬಂಧನ
Update: 2025-05-08 21:37 IST
ಮಂಗಳೂರು: ನಗರದ ಹಲವು ಕಡೆ ಪ್ರತ್ಯೇಕ ಪ್ರಕರಣದಲ್ಲಿ ಮಾದಕ ಸೇವನೆಗೈದ ಆರೋಪದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಜೆಪ್ಪು ಮಾರ್ಕೆಟ್ ಬಳಿ ಮೇ 7ರಂದು ಸಂಜೆ 5ಕ್ಕೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಜಪ್ಪು ರೈಲ್ವೇಗೇಟ್ ಬಳಿಯ ನಿವಾಸಿ ರೈಹಾನ್ (18)ನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಸೆಷ್ಮಾ ರಿವರ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಆರೋಪದಲ್ಲಿ ಅಶೋಕ್‌ನಗರ ಗುಡ್ಡೆ ಸ್ಕೂಲ್ ನಿವಾಸಿ ಕಾರ್ತಿಕ್ (32) ಮತ್ತು ಕೋಡಿಕಲ್ ನಿವಾಸಿ ನಿತೇಶ್ ಕುಮಾರ್ (25) ಹಾಗೂ ಶೇಡಿಗುರಿ ಮೈದಾನದ ಬಳಿ ಗಾಂಜಾ ಸೇವನೆ ಆರೋಪದಲ್ಲಿ ಕೋಡಿಕಲ್ ಕಲ್ಬಾವಿ ನಿವಾಸಿ ರಂಜಿತ್ (31) ಮತ್ತು ಹೊಯಿಗೆಬೈಲು ನಿವಾಸಿ ಮಹೇಶ್ ಶೆಟ್ಟಿ (25) ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.